ತಂದೆ ಮಗಳ ಪ್ರೀತಿಗಿಲ್ಲ ಲಾಕ್ ಡೌನ್: ಮಗಳ ಹುಟ್ಟುಹಬ್ಬಕ್ಕೆ ಸೂಪರ್ ಗಿಫ್ಟ್ ನೀಡಿದ ಅಪ್ಪ
Team Udayavani, Apr 16, 2020, 6:29 PM IST
ಕಡಬ: ಮೋದಲೇ ಲಾಕ್ ಡೌನ್ ಅದರ ಮಧ್ಯೆ ಮಗಳ ಹುಟ್ಟು ಹಬ್ಬ.ಮಗಳಿಗೆ ಏನಾದರೂ ಉಡುಗೊರೆ ನೀಡಬೇಕು. ಏನು ನೀಡುವುದು ಅಂತ ಆಲೋಚನೆ ಮಾಡಿದ್ದಾಗ ಈ ಅಪ್ಪನಿಗೆ ತೋಚ್ಚಿದ್ದು ಒಂದು ವಿಶೇಷ ಉಡುಗೊರೆ ನೀಡುವ ಬಗ್ಗೆ. ಆ ಉಡುಗೊರೆಯಾದರೂ ಏನು ಅಂತೀರಾ ಈ ಸ್ಟೋರಿ ನೊಡಿ. ಇವರ ಹೆಸರು ಮಂಜುನಾಥ್. ಕಡಬದ ಮರ್ಧಾಳ ನಿವಾಸಿ. ಇವರ ಮುದ್ದಿನ ಮಗಳು ಯಾನ್ವಿತಳ ಹನ್ನೊಂದನೆಯ ಹುಟ್ಟು ಹಬ್ಬ. ಮಗಳಿಗೆ ಏನಾದರೂ ಬರ್ತ್ ಡೇ ಗಿಫ್ಟ್ ಕೊಡಬೇಕೆಂದು ನಿರ್ಣಯಿಸಿದ ಮಂಜುನಾಥ್ ಗೆ ಈ ಲಾಕ್ ಡೌನ್ ಸಮಯದಲ್ಲಿ ಏನು ನೀಡಬೇಕು ಎಂದು ತಿಳಿಯಲಿಲ್ಲ. ಹಾಗೇ ಮಗಳಿಗೆ ಪ್ರಕೃತಿಯ ಬಗ್ಗೆ ತಿಳಿಸಬೇಕು ಮತ್ತು ನಮ್ಮ ಪೂರ್ವಜರು ಯಾವ ರೀತಿಯಲ್ಲಿ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ತೀರ್ಮಾನಕ್ಕೆ ಬಂದ ಮಂಜುನಾಥ್ ತನ್ನ ಮಗಳಿಗೆ ಬಿದಿರು,ಹಾಗೂ ಹುಲ್ಲಿನಿಂದ ಪ್ರಾಚೀನ ಕಾಲದಲ್ಲಿ ಹಿರಿಯರು ಉಪಯೋಗ ಮಾಡುತ್ತಿದ್ದ ತರಹದ ಬಿದಿರು ಮನೆಯೊಂದನ್ನು ನಿರ್ಮಿಸಿ ಗಿಫ್ಟ್ ನೀಡಿದ್ದಾರೆ.ಈ ಮನೆಗೆ ತನ್ನ ಮಗಳನ್ನು ಮನೆಯಲ್ಲಿ ಮುದ್ದಾಗಿ ಕರೆಯುವಂತಹ ಮುನ್ನಿ ಎಂಬ ಹೆಸರನ್ನೂ ನೀಡಲಾಗಿದೆ. ಮಾತ್ರವಲ್ಲದೆ ಮಗಳು ಅದರಲ್ಲಿ ಕುಳಿತು ಓದಲು ಬರೆಯಲೂ ವ್ಯವಸ್ಥೆ ಮಾಡಿದ್ದಾರೆ.ಇನ್ನು ಮಗಳು ಯಾನ್ವಿತ ಕೂಡ ತನಗೆ ಅಪ್ಪ ನೀಡಿದ ಬಿದಿರು ಮನೆ ಗಿಫ್ಟ್ ನಿಂದ ಫುಲ್ ಖುಷಿಯಾಗಿದ್ದಾಳೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ