“ಲಂಡನ್‍ಗೆ ಬಂದ ಲಂಬೋದರ’: ಬೊಂಬಾಟ್ ಟ್ರೈಲರ್ ವೀಕ್ಷಿಸಿ

ವಿಭಿನ್ನ ಶೀರ್ಷಿಕೆಯ “ಲಂಡನ್‌ನಲ್ಲಿ ಲಂಬೋದರ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ಬೆಂಗಳೂರಿನಿಂದ ಲಂಡನ್‌ಗೆ ಹೋದ ಯುವಕನೊಬ್ಬನ ಪರದಾಟದ ಕಥೆಯನ್ನು ಇಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಸಂತೋಷ್‌ ನಾಯಕರಾಗಿ ನಟಿಸಿದ್ದಾರೆ. ಏನಾದರೂ ಸಾಧಿಸಬೇಕೆಂದು ಲಂಡನ್‌ಗೆ ಹೋಗಿ ಅಲ್ಲಿ ಪರದಾಡುವ ಸ್ಥಿತಿಯ ಸುತ್ತ ಇವರ ಪಾತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ ಶೃತಿ ಪ್ರಕಾಶ್‌ ನಾಯಕಿ. ಅವರಿಲ್ಲಿ ಕನ್ನಡ, ಕರ್ನಾಟಕವನ್ನು ಪ್ರೀತಿಸುವ ಪ್ರತಿಭಾವಂತ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಹುಭಾಷಾ ನಟ ಸಂಪತ್‌ರಾಜ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್ ಮತ್ತು ಸಾಧು ಕೋಕಿಲಾ ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ