ಒಂದು ಐಶ್ವರ್ಯ ರೈಯನ್ನ ಎಷ್ಟು ಜನರಿಗೆ ಕೊಡೋದು : ಈಶ್ವರಪ್ಪ ಹೇಳಿಕೆಗೆ ಐವನ್ ಡಿಸೋಜಾ ವಿರೋಧ

ಮಂಗಳೂರು: ಒಬ್ಬ ಮಹಿಳೆಯನ್ನ ಒಂದು ವಸ್ತುವಿಗೆ ಹೋಲಿಕೆ ಮಾಡಿದ್ದಾರೆ. ಬಿಜೆಪಿಗರ ಮನಸ್ಥಿತಿ ನೋಡಿ, ಹೇಳಿದ್ರೆ ಮಹಿಳೆಯರು, ಮಾತೆಯರು ಅಂತ ಮಾತನಾಡ್ತಾರೆ. ಒಬ್ಬ ಹಿರಿಯ ಸಚಿವ ಹೀಗೆ ಮಾತನಾಡೋದು ಎಷ್ಟು ಸರಿ ಒಂದು ಐಶ್ವರ್ಯ ರೈಯನ್ನ ಎಷ್ಟು ಜನರಿಗೆ ಕೊಡೋದು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಇವರಿಗೆ ಬಾಯಿ ಮತ್ತು ತಲೆಗೆ ಬ್ಯಾಲೆನ್ಸ್ ಸರಿ ಇದ್ಯಾ? ಎಲ್ಲಿಯಾದ್ರೂ ಕಾಂಬಿನೇಷನ್ ಸರಿಯಿಲ್ವಾ ಅನ್ನೋದು ನನ್ನ ಪ್ರಶ್ನೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.


ಹೊಸ ಸೇರ್ಪಡೆ