ಅಶಕ್ತರಿಗೆ onlineನಲ್ಲಿ ನೆರವಾಗುವ ಟೆಕ್ಕಿ
Team Udayavani, Feb 20, 2020, 7:54 PM IST
ಮಂಗಳೂರು: ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್; ಪ್ರವೃತ್ತಿಯಲ್ಲಿ ರೋಗಿಗಳು ಸಹಿತ ಅಶಕ್ತರಿಗೆ ಸಹಾಯಹಸ್ತ ಚಾಚುವ ಹೃದಯವಂತ. ಕೇವಲ ಐದು ತಿಂಗಳುಗಳಲ್ಲಿ 30 ಕುಟುಂಬಗಳಿಗೆ ಒಟ್ಟು 40 ಲಕ್ಷ ರೂ. ಆರ್ಥಿಕ ನೆರವು ಒದಗಿಸಿಕೊಟ್ಟ ಈ ಟೆಕ್ಕಿಯ ಯಶೋಗಾಥೆ ಮಾದರಿ ಎನಿಸಿಕೊಂಡಿದೆ.