Moodabidri: ಸ್ಯಾನಿಟೈಸರ್, ಕುಡಿಯುವನೀರು ಆಹಾರ ಪೂರೈಕೆಗೆ ಸೌಹಾರ್ದ ಫೋರಂ ಮಾದರಿ
Team Udayavani, Apr 22, 2020, 7:56 PM IST
ಮೂಡುಬಿದಿರೆ: ಪೇಟೆಯ ಅಶ್ವತ್ಥಕಟ್ಟೆಯ ಎದುರು ಸ್ಯಾನಿಟೈಸರ್ ಸಹಿತ ಕೈ ತೊಳೆಯುವ ಎರಡು ಟ್ಯಾಪ್, ಬೇಸಿನ್ಗಳು, ಕಟ್ಟೆಯ ಬುಡದಲ್ಲಿ ಕುಡಿಯುವ ಶುದ್ಧ ನೀರಿನ ಘಟಕ, ಕಾಗದದ ಲೋಟಗಳ ಸಹಿತ, ಪಕ್ಕದಲ್ಲೇ ಹಸಿದವರಿಗೆ ಹಣ್ಣು ಹಂಪಲು ಬಿಸ್ಕತ್ತು, ನೆಲ್ಲಿಕಾಯಿ, ನೀರಿನ ಪುಟ್ಟ ಬಾಟಲಿ …ಎಲ್ಲವೂ ಉಚಿತ. ಇದು ಮೂಡುಬಿದಿರೆಯ ಹತ್ತು ಮಂದಿ ಸದಸ್ಯರಿರುವ ಸೌಹಾರ್ದ ಫೋರಂ ಕೊಡುಗೆ.