ವಿಭಿನ್ನ ಲುಕ್‍ನಲ್ಲಿ “ನಟಸಾರ್ವಭೌಮ’: ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ

ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಸಿನಿಮಾದ ಪೋಸ್ಟರ್ ಹಾಗೂ ಟೀಸರ್​ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಿದೆ. ಹೌದು, 1 ನಿಮಿಷ 46 ಸೆಕೆಂಡ್‌ಗಳ ಟ್ರೈಲರ್‌ ಸಖತ್ ಎಂಟ್ರಟೈನಿಂಗ್ ಆಗಿದ್ದು, ಇದುವರೆಗೂ ಪುನೀತ್ ಕಾಣಿಸಿಕೊಳ್ಳದಂತಹ ಡಿಫ್ರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಕೇಳ್ತಿದ್ದಾಗೆ ಇದೊಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಟ್ರೈಲರ್​ನಲ್ಲಿ ಹಾರರ್, ಕಾಮಿಡಿ, ಆ್ಯಕ್ಷನ್, ಸಸ್ಪೆನ್ಸ್ ಎಲ್ಲಾ ರೀತಿಯ ಎಲಿಮೆಂಟ್ಸ್ ಇವೆ. ಅಪ್ಪು ಒಂದು ಕಡೆ ಕಾಮಿಡಿ ಮಾಡುತ್ತಾ ತುಂಬಾ ವಿಭಿನ್ನವಾಗಿ ಮಿಂಚಿದ್ದಾರೆ. ರಚಿತಾ ರಾಮ್ ರಫ್‌ ಅಂಡ್ ಟಫ್ ಲುಕ್‌ನಲ್ಲಿ ಮಾಡ್ರನ್‌ ಆಗಿ ಜಸ್ಟ್ ಒಂದು ಝಲಕ್ ಕೊಟ್ಟರೆ, ಅನುಪಮಾ ಪರಮೇಶ್ವರನ್ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಹಿರಿಯ ನಟಿ ಸರೋಜಾದೇವಿ, ಅಚ್ಯುತ್‌ ಕುಮಾರ್, ಚಿಕ್ಕಣ್ಣ ಹೀಗೆ ಹಲವು ಕಲಾವಿದರ ಝಲಕ್ ಟ್ರೈಲರ್‌ನಲ್ಲಿ ಭರ್ಜರಿಯಾಗಿ ಮೂಡಿಬಂದಿದೆ. ಟ್ರೈಲರ್ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ ಯೂಟ್ಯೂಬ್​ನಲ್ಲಿ 5 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಪ್ಪು ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ಈ ಸಿನಿಮಾವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಿದ್ದಾರೆ. ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್​ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್​​​​ ನಾಯಕಿಯರಾಗಿ ನಟಿಸಿದ್ದಾರೆ. ಇಮಾನ್‌ ಡಿ ಸಂಗೀತ ಹಾಗೂ ವೈದಿ ಛಾಯಾಗ್ರಹಣ ಚಿತ್ರಕ್ಕಿದ್ದು, ಫೆಬ್ರವರಿ 7 ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ