ಆರೋಗ್ಯ ಯೋಧರಿಗೆ ಬಂತು oxygen bubble helmet ; ಸ್ವದೇಶಿಯಾಗಿ ತಯಾರಿಸಿದ ಮಂಗಳೂರಿನ ವೈದ್ಯ
Team Udayavani, May 7, 2020, 5:36 PM IST
ಮಂಗಳೂರು: ಕೋವಿಡ್ 19 ಜಾಗತಿಕ ಮಟ್ಟದಲ್ಲೆಡೆ ಹಬ್ಬಿರುವ ಕಾರಣ ಸುರಕ್ಷತೆಯ ದೃಷ್ಟಿಯಿಂದ ರೋಗ ಹಬ್ಬದಂತೆ ಬಹಳಷ್ಟು ವೈದ್ಯಕೀಯ ಉಪಕರಣಗಳ ತಂತ್ರಜ್ಞಾನದ ಮೂಲಕ ಅವಿಷ್ಕಾರ ವಾಗುತ್ತಿದೆ.ಈ ಸಮಯದಲ್ಲಿ ಕೋವಿಡ್ ವಿರುದ್ದ ಸೆಣಸಾಡುವ ವಾರಿಯರ್ಸ್ ಮತ್ತು ರೋಗಿಗಳ ಸಹಾಯಕ್ಕಾಗಿ ಸುಲಭವಾಗಿ ಕೈಗೆಟುಕುವ ರೀತಿಯಲ್ಲಿ ನಿರ್ಮಿಸಿದ ಅತ್ಯಂತ ಉಪಯುಕ್ತ ಸಲಕರಣೆಯನ್ನು ಮಂಗಳೂರಿನ ವೈದ್ಯರು ಅವಿಷ್ಕಾರ ಮಾಡಿದ್ದಾರೆ.ಅದೇ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್. ಈಗಾಗಲೇ ಉಪಯೋಗಿಸುತ್ತಿರುವ ಅಕ್ಷಿಜನ್ ಮಾಸ್ಕ್ ನ ಬದಲು ಈ ಅಕ್ಸಿಜನ್ ಹೆಲ್ಮೆಟ್ ಮಾಸ್ಕ್ ನ್ನು ಅನಾಯಸವಾಗಿ ಉಪಯೋಗಿಸಬಹುದು.ಮಾತ್ರವಲ್ಲ ಈ ಉಪಕರಣ ಬಳಸಲು ಬಹಳ ಸುಲಭ ಖರ್ಚು ಕಡಮೆ ಉಪಯೋಗಿಸವವರಿಗೂ ಇದು ಗೊಂದಲ ಇಲ್ಲ .ಇದನ್ನ ವೆಂಟಿಲೇಟರ್ ಬಳಸುವ ರೋಗಿಗೆ ಸುಲಭವಾಗಿ ಬಳಸಬಹುದು.