ಪಣಂಬೂರು: ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಪಣಂಬೂರು : ಪಣಂಬೂರು ಬೀಚ್‌ನಲ್ಲಿ ಕರಾವಳಿ ಉತ್ಸವದ ಅಂಗವಾಗಿ ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಶಾಸಕ ಡಾ| ಭರತ್‌ ಶೆಟ್ಟಿ ಚಾಲನೆ ನೀಡಿದರು.

3ದಿನಗಳ ಕಾಲ ನೆದರ್ಲಂಡ್‌, ಚೀನ, ಇಂಡೋ ನೇಷ್ಯಾ, ಮಲೇಷ್ಯಾ, ಥೈಲಂಡ್‌, ಇಸ್ರೇಲ್‌, ಗುಜರಾತ್‌, ರಾಜ್‌ಕೋಟ್‌, ಮಂಗಳೂರು ಸಹಿತ ವಿವಿಧೆಡೆಯ ಪ್ರಸಿದ್ಧ ಗಾಳಿಪಟ ಹಾರಾಟ ತಜ್ಞರು ವಿವಿಧ ಮಾದರಿ ಗಾಳಿಪಟವನ್ನು ಹಾರಿಸಲಿದ್ದಾರೆ.

ಶನಿವಾರ ಮತ್ತು ರವಿವಾರ ಸಾವಿರಾರು ಮಂದಿ ಪಣಂಬೂರು ಬೀಚ್‌ಗೆ ಆಗಮಿಸುವ ನಿರೀಕ್ಷೆಯಿದೆ. ಯಾವುದೇ ಭದ್ರತಾ ಲೋಪವಾಗದಂತೆ ಭದ್ರತೆ ಕೈಗೊಳ್ಳಲಾಗಿದೆ.


ಹೊಸ ಸೇರ್ಪಡೆ