ಕುಂದಾಪುರ: ಫ್ಲೈಓವರ್‌ಗಾಗಿ ಹೆದ್ದಾರಿಗಿಳಿದ ಪ್ರತಿಭಟನಕಾರರು!

ಕುಂದಾಪುರ ನಗರದ ಅಂದಗೆಡಿಸಿ ಸುಂದರ ಕುಂದಾಪುರ ಕನಸನ್ನು ಭಗ್ನಗೊಳಿಸಿದೆ ಎಂದು ಆರೋಪಿಸಿ ಫ್ಲೈಓವರ್‌ ಕಾಮಗಾರಿ ಬೇಗ ಪೂರೈಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ರಾ.ಹೆದ್ದಾರಿ ತಡೆಗೆ ಮುಂದಾದರು. ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ಹೆದ್ದಾರಿ ಅಧಿಕಾರಿಗಳ ಜತೆ ಪ್ರತಿಭಟನಕಾರರಿಗೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಗೆ ಬೆಂಬಲ ಸೂಚಿಸಲು ಬಂದಿದ್ದ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರು ಪ್ರತಿಭಟನೆಯಲ್ಲಿದ್ದ ಕೆಲವರ ವರ್ತನೆಯಿಂದಾಗಿ ಅರ್ಧದಿಂದ ಹೊರನಡೆದು ಮನವೊಲಿಸಿದ ಬಳಿಕ ಮರಳಿ ಬಂದ ಘಟನೆಗೂ ಪ್ರತಿಭಟನೆ ಸಾಕ್ಷಿಯಾಯಿತು.


ಹೊಸ ಸೇರ್ಪಡೆ