ಅಬ್ಬಾ!!! ಹೆಬ್ಬಾವು ?? ಬರೋಬ್ಬರಿ 31 ಮೊಟ್ಟೆ | Udayavani
Team Udayavani, May 9, 2020, 11:05 AM IST
ಕಟಪಾಡಿ; ವಿಶ್ವನಾಥ ಕ್ಷೇತ್ರದ ಬಳಿಯ ಕಲ್ಲಾಪು ಕೆ ರಾಮಚಂದ್ರ ಪೈ ಅವರ ಮನೆಯ ನಿರುಪಯುಕ್ತ ಶೆಡ್ಡು ಒಂದರ ಒಳಗಡೆ ಯಲ್ಲಿ ಪ್ರತ್ಯ ಪ್ರತ್ಯೇಕವಾಗಿ ಎರಡು ಹೆಬ್ಬಾವುಗಳು 16 ಮತ್ತು 15 ಮೊಟ್ಟೆಗಳಿಗೆ ಕಾವು ಕೊಡುವ ಸ್ಥಿತಿಯಲ್ಲಿ ಕಂಡು ಬಂದಿದ್ದು ಅದನ್ನು ಹಿಡಿದು ಅರಣ್ಯ ಇಲಾಖಾಧಿಕಾರಿಗಳ ಮಾರ್ಗದರ್ಶನದಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿರುತ್ತದೆ. ಕಳೆದ ಜುಲೈ ತಿಂಗಳಿನಲ್ಲಿ ಇದೇ ಪ್ರದೇಶದಲ್ಲಿ ಬಹಳಷ್ಟು ದೊಡ್ಡ ಗಾತ್ರದ ಒಂದು ಹೆಬ್ಬಾವು ಕಂಡುಬಂದಿದ್ದು ಹೆಬ್ಬಾವನ್ನು ಕೂಡ ಮನು ಪೈ ಅವರು ಹಿಡಿದು ಸುರಕ್ಷತೆ ಗೊಳಿಸಿದ್ದರು.