“ರವಿ ಹಿಸ್ಟರಿ’ಯಲ್ಲಿ ಮಿಸ್ಟರಿ: ಬೊಂಬಾಟ್ ಟ್ರೈಲರ್ ವೀಕ್ಷಿಸಿ

ಮಧುಚಂದ್ರ ನಿರ್ದೇಶನದ “ರವಿ ಹಿಸ್ಟರಿ’ ಚಿತ್ರ ತೆರೆ ಮೇಲೆ ಈ ವಾರ ಬರುತ್ತಿದೆ. ಅಲ್ಲದೇ “ರವಿ ಹಿಸ್ಟರಿ’ ಚಿತ್ರದ ಶೀರ್ಷಿಕೆ ಕೇಳಿದೊಡನೆ ಅನೇಕರಿಗೆ ಇದು ಡಿ.ಕೆ. ರವಿ ಕುರಿತು ಮಾಡಿದ ಚಿತ್ರವೋ ಅಥವಾ ರವಿ ಬೆಳಗೆರೆ ಬಗ್ಗೆ ಮಾಡಿದ ಸಿನಿಮಾವೋ ಎಂಬ ಅನುಮಾನ ಮೂಡಿದೆಯಂತೆ! ಆದರೆ, ನಿರ್ದೇಶಕ ಮಧುಚಂದ್ರ ನೀಡುವ ಸ್ಟಷ್ಟನೆ ಹೀಗಿದೆ; “ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ರವಿ ಎಂಬ ಹೆಸರು ಹೆಚ್ಚಾಗಿ ಬಳಕೆಯಲ್ಲಿದೆ. ಹೀಗಾಗಿ ಚಿತ್ರಕ್ಕೆ ಈ ಹೆಸರನ್ನು ಇಟ್ಟಿದ್ದೇವೆ. ಇನ್ನು “ಚಿತ್ರದಲ್ಲಿ ಕಥಾ ನಾಯಕನ ಹೆಸರು ರವಿ. ಆತನಿಗೆ ಅವನದೇ ಆದ ಕನಸುಗಳಿರುತ್ತವೆ. ಅದನ್ನು ಸಾಧಿಸಲು ಹೋದಾಗ ಆತನ ಜೀವನದಲ್ಲಿ ಏನೆಲ್ಲ ಆಗುತ್ತದೆ ಅನ್ನೋದು ನಮ್ಮ ಚಿತ್ರದ ಒನ್​ಲೈನ್ ಸ್ಟೋರಿ. ಒಂದು ಕಡೆ ಕಾಲೇಜ್ ಕಥೆ, ಮತ್ತೊಂದು ಕಡೆ ಡಾನ್ ಕಥೆ. ಹೀಗೆ ಚಿತ್ರಕ್ಕೆ ನಾಲ್ಕೈದು ಕೋನಗಳ್ಳುಳ ಕಥಾಹಂದರವಿದೆ. ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷ ಎಂದರೆ, ಚಿತ್ರಕ್ಕೆ ಅವರೇ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪಲ್ಲವಿ ರಾಜು ಹಾಗೂ ಐಶ್ವರ್ಯಾ ರಾವ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅನಂತ್‌ ಅರಸ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅಬ್ದುಲ್‌ ಕರೀಂ ಸಂಕಲನ ಮಾಡಿದ್ದಾರೆ. ಸೂರಜ್‌ ಸರ್ಜಾ ಮತ್ತು ವಿಜೇತ್‌ ಕೃಷ್ಣ ಸಂಗೀತ ನೀಡಿದ್ದಾರೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ