Padubidri ಉಚ್ಚಿಲ ಕೆಟ್ಟು ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ
Team Udayavani, Apr 21, 2020, 12:18 PM IST
ಉಚ್ಚಿಲ: ಇಲ್ಲಿಯ ಮಸೀದಿಯ ಬಳಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಚಲಿಸುತ್ತಿದ್ದ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಎರಡೂ ಲಾರಿಗಳು ಚತುಃಷ್ಪಥ ಹೆದ್ದಾರಿಯ ಎರಡೂ ಭಾಗದಲ್ಲಿ ಉರುಳಿ ಬಿದ್ದಿವೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.