ಅಂತೂ “ಸೀತಾರಾಮ’ ಬಂದ್ರು: ಕಮರ್ಷಿಯಲ್ ಟ್ರೈಲರ್ ವೀಕ್ಷಿಸಿ

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮತ್ತೊಂದು ಟ್ರೈಲರನ್ನು ಬಿಡುಗಡೆ ಮಾಡಿದೆ. ಹೌದು, ಶನಿವಾರ ಸಂಜೆ ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಅದ್ಧೂರಿಯಾಗಿ “ಸೀತಾರಾಮ ಕಲ್ಯಾಣ’ದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ತುಂಟತನ ಪ್ರೀತಿ, ಕುಟುಂಬದವರ ನಡುವಿನ ಬಾಂಧವ್ಯ ತುಂಬಿದೆ. ಜೊತೆಗೆ ನಿಖಿಲ್ ಅವರ ಮಾಸ್ ಫೈಟ್ ಇದ್ದು, ಇದು ಪಕ್ಕಾ ಒಂದು ಸಾಂಪ್ರದಾಯಕ ಚಿತ್ರವಾಗಿದೆ. ಅಲ್ಲದೇ ಟ್ರೈಲರ್ ನಲ್ಲಿ ತಂದೆಯ ಪ್ರೀತಿಗೆ ನೀಡಿರುವ ಗೌರವ ಸಿನಿಮಾದ ವಿಶೇಷತೆ ಎಂದು ಹೇಳಬಹುದಾಗಿದೆ. ಈಗಾಗಲೇ ಟ್ರೈಲರ್ ಯುಟ್ಯೂಬ್​ನಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡುತ್ತಿದ್ದು, ಟ್ರೆಂಡಿಂಗ್‍ನಲ್ಲಿದೆ. ಇನ್ನು ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಕಮರ್ಷಿಯಲ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ