ಸೈಕಲ್‌ ಏರಿ ಮತದಾನ ಜಾಗೃತಿ ಮೂಡಿಸಿದ ಪೊಲೀಸರು ಮತ್ತು ಪತ್ರಕರ್ತರು

ರಾಜ್ಯದ ಹೆಸರಾಂತ ಕನ್ನಡ ದಿನಪತ್ರಿಕೆ ಉದಯವಾಣಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (KSRP) ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿ ಏಪ್ರಿಲ್ 10, ಬುಧವಾರದಂದು ಮತದಾನ ಜಾಗೃತಿ ಸೈಕಲ್‌ ಜಾಥಾ ನಡೆಯಿತು. ಉದಯವಾಣಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿರುವ ಅನಂತಕೃಷ್ಣ ಹಾಗೂ KSRP ಮೂರನೇ ಬೆಟಾಲಿಯನ್‌ ಕಮಾಂಡೆಂಟ್‌ ರಾಮಕೃಷ್ಣ ಪ್ರಸಾದ್‌ ಜಂಟಿಯಾಗಿ ಈ ಸೈಕಲ್‌ ಜಾಥಾಗೆ ಚಾಲನೆ ನೀಡಿದರು. KSRP ADGP ಭಾಸ್ಕರ್‌ ರಾವ್‌, DIG ಸತೀಶ್‌ ಕುಮಾರ್‌, ನಾಲ್ಕನೇ ಬೆಟಾಲಿಯನ್‌ ಕಮಾಂಡೆಂಟ್‌ ಕುಮಾರಿ ಮೊಹಮ್ಮದ್‌ ಸುಜೀತಾ, ಕಮಾಂಡೆಂಟ್‌ ರಾಮಕೃಷ್ಣ ಪ್ರಸಾದ್‌, ಇನ್‌ ಸ್ಪೆಕ್ಟರ್‌ ಸಮಂತ್‌ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಉದಯವಾಣಿ ದಿನಪತ್ರಿಕೆಯ ಸಿಬ್ಬಂದಿ ವರ್ಗದವರು ಸೈಕಲ್‌ ಏರಿ ಮಹಾನಗರಿಯ ನಾಗರಿಕರಲ್ಲಿ ಮತದಾನದ ಅರಿವು ಮೂಡಿಸುವ ಪ್ರಶಂಸಾರ್ಹ ಕಾರ್ಯವನ್ನು ಮಾಡಿದರು.


ಹೊಸ ಸೇರ್ಪಡೆ

  • ಚಿಕ್ಕಮಗಳೂರು: ಮತ ಚಲಾಯಿಸದೆ ಮೋಜು ಮಸ್ತಿಗಾಗಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಹಾರ ಹಾಕಿ, ಶಹಬ್ಟಾಸ್‌ ಗಿರಿ ನೀಡಿ...

  • ಕೋಟ: ಕೋಟ ಹೋಬಳಿಯ ಕೋಟತಟ್ಟು, ಪಾರಂಪಳ್ಳಿಗುಡ್ಡಿಶಾಲೆ, ಕಾವಡಿ, ಗುಂಡ್ಮಿ ಮತಕೇಂದ್ರದಲ್ಲಿ ಮತಯಂತ್ರದಲ್ಲಿ ದೋಷ ಉಂಟಾಗಿ ಮತಚಲಾವಣೆಗೆ ಸ್ವಲ್ಪ ಸಮಸ್ಯೆ ಯಾಯಿತು. ಕೋಟತಟ್ಟು...

  • ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರಿರುವ ಹಾಗೂ ಅಲ್ಪಸಂಖ್ಯಾತರೆ ಹೆಚ್ಚಿರುವ ಕಲಬುರಗಿ ಉತ್ತರ ಕ್ಷೇತ್ರದಲ್ಲಿ...

  • ಕುಷ್ಟಗಿ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿಲುವಿಗೆ ನಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ...

  • ದಾವಣಗೆರೆ: ಪ್ರತಿ ವರ್ಷದಂತೆ ಈ ವರ್ಷವೂ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹಳೇಪೇಟೆ ಶ್ರೀ ವೀರಭದ್ರೇಶ್ವರ ಕೆಂಡ ಹಾಯುವ ಮೂಲಕ ಗಮನ ಸೆಳೆದರು. ಹಳೇಪೇಟೆ...

  • ಯಾದಗಿರಿ: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಗುರುಮಠಕಲ್‌ ಈಗ ಜೆಡಿಎಸ್‌ ವಶದಲ್ಲಿದ್ದು, ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುವ ವಿಚಾರ ಇಲ್ಲಿ ಇನ್ನೂ ನಿಗೂಢವಾಗಿಯೇ...