Video Viral : ಚಿಕ್ಕಮಗಳೂರು ನಗರದಲ್ಲಿ ಆತಂಕ ಸೃಷ್ಟಿಸಿದ ಅನಾಮಧೇಯ ಸೂಟ್ ಕೇಸ್
Team Udayavani, May 14, 2020, 3:17 PM IST
ಚಿಕ್ಕಮಗಳೂರು: ಅನಾಮಧೇಯ ಮಹಿಳೆಯೊಬ್ಬರು ನಗರದ ಮುಖ್ಯ ರಸ್ತೆಯಲ್ಲಿ ಸೂಟ್ ಕೇಸ್ ತಂದಿಟ್ಟಿದ್ದು ನಗರದ ಜನರಲ್ಲಿ ಆತಂಕ ಮೂಡಿಸಿದ ಘಟನೆ ಬುಧವಾರ ಸಂಜೆ ವೇಳೆ ನಡೆದಿದೆ. ಚೂಡಿದಾರ ಧರಿಸಿರುವ ಮಹಿಳೆ ನಗರದ ಬಸವನಹಳ್ಳಿ ಮುಖ್ಯರಸ್ತೆಯ ಮರದ ಕೆಳಗೆ ಸೂಟ್ ಕೇಸ್ ಇಟ್ಟು ಹೋಗಿದ್ದು, ಹೋಟೆಲ್ವೊಂದರ ಸಿಸಿ ಟಿವಿ ಕ್ಯಾಮರದಲ್ಲಿ ಮಹಿಳೆಯ ಚಲನವಲನ ಸೆರೆಯಾಗಿದೆ. ಒಂದು ಕೈಯಲ್ಲಿ ಸೂಟ್ಕೇಸ್ ಹಿಡಿದಿದ್ದ ಮಹಿಳೆ ಮೊಬೈಲ್ನಲ್ಲಿ ಸಂಭಾಷಣೆ ನಡೆಸುತ್ತ ಬಂದು ರಸ್ತೆಯ ಪಾದಚಾರಿ ಮಾರ್ಗದ ಮರವೊಂದರ ಬಳಿ ಕೆಲ ಹೊತ್ತು ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದಂತೆ ತನ್ನ ಕೈಯಲ್ಲಿದ್ದ ಸೂಟ್ಕೇಸ್ನ್ನು ಮರಕ್ಕೆ ಒರಗಿಸಿದ್ದಾಳೆ. ನಂತರ ಕೆಲ ಕ್ಷಣಗಳು ಮರದ ಬಳಿಯೇ ನಿಂತು ಮೊಬೈಲ್ನಲ್ಲಿ ಸಂಭಾಷಣೆ ನಡೆಸುವ ಆಕೆ. ಏನು ಅರಿಯಂತೆ ಸ್ಥಳದಿಂದ ಕ್ಷಣಮಾತ್ರದಲ್ಲಿ ತೆರಳುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.