ತಡರಾತ್ರಿ ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದವನ ಗ್ರಹಚಾರ ಬಿಡಿಸಿದ ಬಾಲಕಿಯರು
Team Udayavani, Dec 2, 2019, 8:26 PM IST
ಕಲಬುರಗಿ: ಬಾಲಕಿಯರ ಹಾಸ್ಟೆಲ್ ಗೆ ತಡರಾತ್ರಿ ನುಗ್ಗಿದ ವ್ಯಕ್ತಿಯೊಬ್ಬನನ್ನು ಬಾಲಕಿಯರೇ ಹಿಡಿದು ಮುಖಕ್ಕೆ ಖಾರದ ಪುಡಿ ಎರಚಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ. ನಗರದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕಿಯರ ಹಾಸ್ಟೆಲ್ ಗೆ ಶುಕ್ರವಾರ ರಾತ್ರಿ ಕುಡಿದ ಮತ್ತಿನಲ್ಲಿ ವ್ಯಕ್ತಿ ಗೋಡೆಯ ಸಹಾಯದಿಂದ ಒಳ ನುಗ್ಗಿದ್ದಾನೆ. ಗೋಡೆಯ ಮೂಲಕವೇ ಮೂರನೇ ಮಹಡಿಗೆ ಹೋಗಿದ್ದಾನೆ. ಈ ವೇಳೆ ಅನುಮಾನಗೊಂಡ ಯುವತಿಯರು ರೂಮ್ ಗಳಿಂದ ಹೊರ ಬಂದಿದ್ದಾರೆ.