ಕಲ್ಲಿಕೋಟೆ ವಿಮಾನ ದುರಂತದ First Visuals
Team Udayavani, Aug 8, 2020, 4:17 AM IST
ವಂದೇ ಭಾರತ್ ಮಿಷನ್ ನಲ್ಲಿ ದುಬಾಯಿಯಿಂದ ಇಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ರನ್ ವೇನಲ್ಲಿ ಜಾರಿದ ಪರಿಣಾಮ ಈ ದುರಂತ ಸಂಭವಿಸಿದೆ.
ಈ ವಿಮಾನವು ರನ್ ವೇನಲ್ಲಿ ಇಳಿಯುವ ಯತ್ನದಲ್ಲಿ ಪೈಲಟ್ ನಿಯಂತ್ರಣ ತಪ್ಪಿ ಮುಂದಕ್ಕೆ ಜಾರಿ 35 ಅಡಿ ಆಳದ ಕಮರಿಗೆ ಉರುಳಿ ಬಿತ್ತು. ಹೀಗೆ ಕಮರಿಗೆ ಉರುಳಿದ ವಿಮಾನ ಇಬ್ಭಾಗವಾಗಿದೆ ಮತ್ತು ಆ ಸ್ಥಳದಿಂದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿಯ ಟೇಬಲ್ ಟಾಲ್ ವಿಮಾನ ನಿಲ್ದಾಣವಾಗಿದೆ.