ತುಮಕೂರು ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ ! ಜನರಲ್ಲಿ ಹೆಚ್ಚುತ್ತಿದೆ ಆತಂಕ
Team Udayavani, Apr 30, 2020, 7:42 PM IST
ತುಮಕೂರು : ಕಲ್ಪತರು ನಾಡಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಗುರುವಾರ ಮತ್ತೂಂದು ಪ್ರಕರಣ ಧೃಢ ಪಟ್ಟಿದ್ದು ಸೋಂಕಿತರ ಸಂಖ್ಯೆ 5ಕ್ಕೆ ಏರಿದೆ. ಏ.26 ರಂದು ಮೃತಪಟ್ಟಿದ್ದ ಪಿ-535ರ ವೃದ್ದನ ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ಪತ್ನಿ ಪಿ-553ಗೂ ಕೋವಿಡ್-19 ಸೋಂಕು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 5 ಜನರಿಗೆ ಸೋಂಕು ತಗಲಿದ್ದು ಇಬ್ಬರು ಮೃತಪಟ್ಟಿದ್ದು. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದು ಒಬ್ಬರು ಗುಣಮುಖರಾಗಿದ್ದಾರೆ. ದಿನೇ ದೆನೇ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆತಂಕ ಹೆಚ್ಚುತ್ತಿದೆ.