ತೆರೆ ಮೇಲೆ “ಯಜಮಾನ’ನ ದರ್ಶನ: ಮಾಸ್ ಟ್ರೈಲರ್ ವೀಕ್ಷಿಸಿ

ದರ್ಶನ್‌ ನಾಯಕರಾಗಿರುವ “ಯಜಮಾನ’ ಚಿತ್ರವು ಇಂದು ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿ. ಹರಿಕೃಷ್ಣ ಹಾಗೂ ಪಿ. ಕುಮಾರ್​ ನಿರ್ದೇಶನದ ಈ ಚಿತ್ರಕ್ಕೆ ಬಿ. ಸುರೇಶ್ ಹಾಗೂ ಶೈಲಜಾ ನಾಗ್​ ಬಂಡವಾಳ ಹೂಡಿದ್ದಾರೆ. ದರ್ಶನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್​ ಕಾಣಿಸಿಕೊಂಡಿದ್ದಾರೆ. ಪರಭಾಷೆಗಳಲ್ಲಿ ಮಿಂಚಿರುವ ಅನೂಪ್​ ಠಾಕೂರ್​ ಸಿಂಗ್​ ಈ ಚಿತ್ರದ ವಿಲನ್. ಅಲ್ಲದೇ “ಡಾಲಿ’ ಧನಂಜಯ್​ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುಮಾರು ಒಂದೂವರೆ ವರ್ಷಗಳ ನಂತರ ಬರುತ್ತಿರುವ ದರ್ಶನ್‌ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿದೆ. “ತಾರಕ್‌’ ನಂತರ ದರ್ಶನ್‌ ಅವರ ಯಾವ ಸಿನಿಮಾವೂ ತೆರೆಕಂಡಿಲ್ಲ. ಈಗ “ಯಜಮಾನ’ ಬಿಡುಗಡೆಯಾಗಿದ್ದು, ತೆರೆಯಲ್ಲಿ ಆರ್ಭಟಿಸುತ್ತಿದೆ. ಚಿತ್ರದ ಮಾಸ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ