ಠಾಣೆಗೇ ನುಗ್ಗಿ ಮೊಬೈಲ್‌ ಕದ್ದಿರುವ ಚತುರ ಕಳ್ಳರು!

Team Udayavani, Jan 13, 2020, 7:53 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ಇಲ್ಲಿ ಭದ್ರವಾಗಿ ಇಡಲಾಗಿದ್ದ ಸುಮಾರು 185 ಮೊಬೈಲ್‌ಗ‌ಳನ್ನು ಕಳ್ಳರು ಅಪಹರಿಸಿದ್ದಾರೆ. ಹೀಗೆಂದ ಕೂಡಲೇ, ಈ ಕಳ್ಳತನ ಯಾವುದೋ ಮೊಬೈಲ್‌ ಅಂಗಡಿಯಲ್ಲಿ ನಡೆದಿರಬೇಕು ಎಂದು ನೀವು ಊಹಿಸಿದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ಈ ಕಳ್ಳತನ ನಡೆದಿರುವುದು ಪುಣೆ ಜಿಲ್ಲೆಯ ಕೊಲ್ಹಾಪುರ ಪೊಲೀಸ್‌ ಠಾಣೆಯಲ್ಲಿ!

ಹಾಗೆಂದ ಮಾತ್ರಕ್ಕೆ, ಪೊಲೀಸ್‌ ಠಾಣೆಯಲ್ಲಿ ಮೊಬೈಲ್‌ ಅಂಗಡಿಯಿತ್ತಾ ಎಂದು ಕೇಳಬೇಡಿ. ಅವುಗಳು ಹೊಸ ಮೊಬೈಲ್‌ಗ‌ಳಲ್ಲ. ಕದ್ದ ಮೊಬೈಲುಗಳು… ಛೇ… ಪೊಲೀಸರಿಗ್ಯಾಕೆ ಇಂಥ ಕದಿಯೋ ಖಯಾಲಿ ಬಂತು ಎನ್ನಬೇಡಿ.

ಏಕೆಂದರೆ, ಇವು ನಾನಾ ಮೊಬೈಲ್‌ ಕಳವು ಪ್ರಕರಣಗಳಲ್ಲಿ ಕಳ್ಳರಿಂದ ವಶಪಡಿಸಿಕೊಂಡ ಮೊಬೈಲುಗಳು! ಅವನ್ನು ಠಾಣೆಯ ಕೊಠಡಿಯೊಂದರಲ್ಲಿ ‘ಸು (ಅ) ಭದ್ರವಾಗಿ’ ಇಡಲಾಗಿತ್ತು! ಆದರೆ, ಅಲ್ಲಿಂದಲೇ ಅವುಗಳನ್ನು ಯಾರೋ ಕದ್ದಿದ್ದಾರೆ. ಇದು, ಆ ಮೊಬೈಲ್‌ಗ‌ಳ ಮಾಲೀಕರಿಗಷ್ಟೇ ಅಲ್ಲ, ಅವನ್ನು ಕದ್ದಿದ್ದ ಕಳ್ಳರಿಗೂ ಸಿಟ್ಟು ತರಿಸಿದೆಯಂತೆ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ