ಮೀನುಗಳಿಗೆ ಆಹಾರ ತಿನಿಸಿದ ಬಾತುಕೋಳಿ
ಹೌದಾ ಮಾರಾಯ್ರೆ!
Team Udayavani, Jan 18, 2020, 8:10 AM IST
ಪ್ರಾಣಿ, ಪಕ್ಷಿಗಳು ತಮ್ಮ ಪ್ರಭೇದವಲ್ಲದ ಮತ್ತೂಂದು ಜೀವಿಗೆ ಔದಾರ್ಯ ತೋರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಹೃದಯ ಬೆಚ್ಚಗಾಗಿಸುವ ಅಂಥದ್ದೇ ವೀಡಿಯೋವನ್ನು ಜಾಲತಾಣಿಗರು ಅತಿಯಾಗಿ ಮೆಚ್ಚಿದ್ದಾರೆ.
ಬಾತುಕೋಳಿಯೊಂದು ಕೊಳದೊಳಗಿರುವ ಮೀನುಗಳಿಗೆ ತನ್ನ ಕೊಕ್ಕಿನಿಂದ ಆಹಾರ ಧಾನ್ಯಗಳನ್ನು ತಿನ್ನಿಸುವ ವೀಡಿಯೋವಿದು. ಈ ವೀಡಿಯೋವನ್ನು ಯಾರು ಅಪ್ಲೋಡ್ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಇದನ್ನು ಬ್ರೆಜಿಲ್ನ ಮೀನುಗಾರ ಸಂಘದ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ.
ವೀಡಿಯೋದಲ್ಲಿ ಬಾತುಕೋಳಿ ಎಲ್ಲ ಮೀನುಗಳಿಗೂ ಸಮನಾಗಿ ಆಹಾರ ನೀಡಲು ಪ್ರಯತ್ನಿಸುತ್ತದೆ. ಅದನ್ನೂ ಕೂಡ ಎಲ್ಲರೂ ಕೊಂಡಾಡಿದ್ದಾರೆ. ಈ ಪೋಸ್ಟ್ ಅಪ್ಲೋಡ್ ಆದ ಕೆಲವೇ ದಿನಗಳಲ್ಲಿ 1.2 ಕೋಟಿ ಬಾರಿ ವೀಕ್ಷಿಸಲ್ಪಟ್ಟಿದೆ.
Show me a better example of friendship. These fish got one good friend. #FB. pic.twitter.com/oBfpKqyhiO
— Parveen Kaswan, IFS (@ParveenKaswan) January 15, 2020