ಕೋಳಿ ಕೇಳದೇ ಬಟ್ಟೆ ತೊಡಿಸಿದ!
Team Udayavani, Aug 21, 2017, 4:26 AM IST
ಅಂದ ಹಾಗೆ ಬ್ರಿಟನ್ನಲ್ಲಿ ಕೋಳಿ ಕಳ್ಳರಿಲ್ಲವೇ? ಈ ಸುದ್ದಿ ನೋಡಿದರೆ ಇರಲಿಕ್ಕಿಲ್ಲ ಎಂದನಿಸುತ್ತದೆ. ಯಾಕಂದ್ರೆ, ಇಲ್ಲೊಬ್ಬ ತನ್ನ ಕೋಳಿಗಳನ್ನು ಔಟಿಂಗ್ಗೆ ಕಳುಹಿಸಿದ್ದಾನೆ. ಕೋಳಿಗಳು ದಿನಾ ಮನೆಯ ಆವರಣದಲ್ಲೇ ಸುತ್ತುತ್ತವೆ. ಅವುಗಳಿಗೂ ಹೊರಗೆ ಹೋಗಬೇಕೆಂದು ಆಸೆಯಿರುತ್ತೆ. ಆ
ಆಸೆಯನ್ನು ಪೂರೈಸೋಣ ಎಂದು ಅವುಗಳಿಗೆ ರಿಫ್ಲೆಕ್ಟರ್ ಇರುವ ಗುಲಾಬಿ ಬಣ್ಣದ ಬಟ್ಟೆಗಳನ್ನು ತೊಡಿಸಿ, ಅದರಲ್ಲಿ ತನ್ನ ಫೋನ್ ನಂಬರ್ ಬರೆದು ಕಳುಹಿಸಿದ್ದಾನೆ. ಏಕೆಂದು ಕೇಳಿದ್ರೆ, “ದಾರಿಯಲ್ಲಿ ಕೋಳಿಗಳು ವಾಹನದಡಿ ಬೀಳದಿರಲಿ ಎಂದು ರಿಫ್ಲೆಕ್ಟರ್ ಹಾಕಿದ್ದಾಗಿಯೂ, ತುಂಬಾ ದೂರ ಹೋಗಿ ಕಾಣೆಯಾದರೆ ಸಿಕ್ಕಿದವರು ಅದನ್ನು ಮರಳಿಸಲಿ ಎಂದು ನಂಬರ್ ಬರೆದಿದ್ದಾಗಿಯೂ ಹೇಳಿದ್ದಾನೆ ಈ ಮಹಾನುಭಾವ.