ಮರಿ ಜಿರಾಫೆಯ ಮೊದಲ ನಡಿಗೆಯ ವಿಡಿಯೋಗೆ ಮೆಚ್ಚುಗೆ
ಹೌದಾ ಮಾರಾಯ್ರೆ!
Team Udayavani, Feb 19, 2020, 7:14 AM IST
ಆಗ ತಾನೆ ಹುಟ್ಟಿದ ಜಿರಾಫೆ ಮರಿ ಸ್ವ ಪ್ರಯತ್ನದಿಂದ ಎದ್ದು ನಿಂತು ನಡೆಯಲು ಮಾಡುವ ಪ್ರಯತ್ನದ ವಿಡಿಯೋ ಈಗ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಐಎಫ್ಎಸ್ (ಅರಣ್ಯ ಸೇವೆ) ಅಧಿಕಾರಿ ಸುಶಾಂತಾ ನಂದ ಈ ವಿಡಿಯೋ ಹಂಚಿಕೊಂಡಿದ್ದಾರೆ.
ತಪ್ಪು ಹೆಜ್ಜೆಗಳನ್ನಿಡುತ್ತಾ ಪಂಜರದ ಒಳಗೆ ಸಂಚರಿಸುವ ದೃಶಾವಳಿಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಡೆಯಲು ಪ್ರಯತ್ನಿಸುವ ಕಾಯಕದಲ್ಲಿ ಮರಿ ಜಿರಾಫೆ ಹಲವು ಬಾರಿ ಬೀಳುತ್ತದೆ. ಇದರ ಹೊರತಾಗಿಯೂ ಪಟ್ಟು ಬಿಡದ ಅದು, ನಡೆಯಲು ಕಲಿತೇ ತೀರುವೆ ಎಂಬ ಹಠಕ್ಕೆ ಬಿದ್ದು, ತನ್ನ ಗುರಿ ಸಾಧನೆಯಲ್ಲಿ ಯಶಸ್ವಿಯಾಗುತ್ತದೆ.
ಸುಶಾಂತಾನಂದ ನೀಡಿರುವ ಶೀರ್ಷಿಕೆ ಪ್ರಕಾರ ಮರಿ ಜಿರಾಫೆ ಹುಟ್ಟಿ 30-60 ಸೆಕೆಂಡುಗಳ ಬಳಿಕ ನಿಧಾನವಾಗಿ ಹೆಜ್ಜೆ ಹಾಕಲು ಪ್ರಯತ್ನ ಮಾಡುತ್ತದೆ. ಹತ್ತು ಗಂಟೆಗಳ ನಂತರ ಮರಿಗಳು ಸರಿಯಾದ ರೀತಿಯಲ್ಲಿ ಗುಂಪಿನಲ್ಲಿ ನಡೆಯಲು ಮತ್ತು ಅವುಗಳ ಜತೆಗೆ ಇರುವಿಕೆಯ ಬಗ್ಗೆ ತಿಳಿದುಕೊಳ್ಳುತ್ತದೆ. ಸೌರವ್ ಸನ್ಯಾಲ್ ಎಂಬವರು ಟ್ವೀಟ್ ಮಾಡಿ ಇದೊಂದು ಹೃದಯಸ್ಪರ್ಶಿ ವಿಡಿಯೋ ಎಂದು ಬರೆದುಕೊಂಡಿದ್ದಾರೆ.
Baby giraffes take their 1st adorably wobbly steps 30-60 min after making their debuts. After about 10 hrs it should be able to run & keep up the heard. That’s too quick ?? pic.twitter.com/Rzrl9YCt7b
— Susanta Nanda IFS (@susantananda3) February 17, 2020
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ