12 ತಾಸು ಬಳಿಕ ಮೂಗಿಂದ ಹೊರ ಬಂದ ಜಿರಲೆ!
Team Udayavani, Feb 4, 2017, 4:08 AM IST
ಅಡುಗೆ ಪಾತ್ರೆಗಳ ಮೇಲೊ ಅಥವಾ ತಿನ್ನುವ ಪದಾರ್ಥಗಳಲ್ಲೊ ಜಿರಲೆ ನೋಡಿದ್ರೇ ಒಂದು ರೀತಿ ಅಸಹ್ಯ. ಇನ್ನು ಕಿವಿ, ಮುಗಿನೊಳಗೊ ಹೋದ್ರೆ ಗತಿಯೇನು ? ಕಲ್ಪನೆಗೂ ನಿಲುಕದ್ದು ! ಅಂಥದ್ದರಲ್ಲಿ ಜಿರಲೆ ಮಹಿಳೆಯೊಬ್ಬರ ಮೂಗಿನೊಳಗೆ ಸೇರಿ 12 ತಾಸಿನ ಬಳಿಕ ವೈದ್ಯರ ಸಹಾಯದಿಂದ ಹೊರ ಬಂದಿದೆ. ಮಹಿಳೆಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚೆನ್ನೈಯ ಇಂಜಾಮ್ ಬಾಕಮ್ ಪ್ರದೇಶದ ಸೆಲ್ವಿ (42) ಅವರ ಮೂಗಿನೊಳಗೆ ಜಿರಲೆ ಪ್ರವೇಶಿಸಿದೆ. ತತ್ಕ್ಷಣವೇ ಆಕೆ ಚೆನ್ನೈಯ ಮೂರ್ನಾಲ್ಕು ಆಸ್ಪತ್ರೆಗಳಿಗೆ ಅಲೆದರು. ಎಲ್ಲಿಯೂ ಜಿರಲೆಯನ್ನು ಹೊರತೆಗೆಯಲು ವೈದ್ಯರು ಒಪ್ಪಿಕೊಂಡಿಲ್ಲ. ಇದೇ ವೇಳೆ ಸೆಲ್ವಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ. ಇನ್ನೇನೂ ಜಿರಲೆ ತೆಗೆಯಲು ಸಾಧ್ಯವೇ ಇಲ್ಲ ಅನ್ನುವ ವೇಳೆಗೆ ಚೆನ್ನೈಯ ಸ್ಟಾನ್ಲ„ ಮೆಡಿಕಲ್ ಕಾಲೇಜಿನ ವೈದ್ಯರು ಆಕೆಯನ್ನು ದಾಖಲಿಸಿಕೊಂಡಿದ್ದಾರೆ. ನಾಸೆಲ್ ಎಂಡೋಸ್ಕೋಪ್ ಚಿಕಿತ್ಸೆ ನೀಡಿ ಜಿರಲೆಯನ್ನು ಜೀವಂತವಾಗಿಯೇ ಹೊರತೆಗೆದಿದ್ದಾರೆ. ಸೆಲ್ವಿ ಪ್ರಾಣಾಯಪಾದಿಂದ ಪಾರಾಗಿದ್ದಾರೆ.