ಒಂದೇ ಹಾಸಿಗೆಯಲ್ಲಿ ಮಗು, ಗೊಂಬೆಗೆ ಚಿಕಿತ್ಸೆ
Team Udayavani, Aug 31, 2019, 11:18 AM IST
ನವ ದೆಹಲಿ: ದೆಹಲಿಯ ಲೋಕ ನಾಯಕ್ ಆಸ್ಪತ್ರೆಯ ವೈದ್ಯರು 11 ತಿಂಗಳ ಮಗುವಿಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಮೊದಲು ಮಗುವಿನ ಗೊಂಬೆಗೆ ಚಿಕಿತ್ಸೆ ನೀಡಿದ್ದಾರೆ. ಈಗ ಮಗು ಝೈರಾ ಮತ್ತು ಅದರ ಗೊಂಬೆ ಪರಿ ಒಂದೇ ಹಾಸಿಗೆ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಝೈರಾ ಮಲಿಕ್ ಬಿದ್ದು ತೊಡೆ ಮೂಳೆ ಮುರಿದುಕೊಂಡಿದ್ದಳು. ಕಾಲುಗಳನ್ನು ನೇರವಾಗಿ ಇರಿಸಿ ಚಿಕಿತ್ಸೆ ನೀಡಬೇಕಿತ್ತು. ಆದರೆ ವೈದ್ಯರು ತನ್ನನ್ನು ಮುಟ್ಟಲು ಝೈರಾ ಬಿಡುತ್ತಲೇ ಇರಲಿಲ್ಲ.ಕಡೆಗೆ ಆಕೆಯ ಪೋಷಕರು ಆಕೆಯ ಗೊಂಬೆಯನ್ನು ತಂದರು. ವೈದ್ಯರು ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಝೈರಾ ತಾನೂ ಆರಾಮಾಗಿ ಚಿಕಿತ್ಸೆ ಮಾಡಿಸಿಕೊಂಡಳು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ