ಕನ್ಯಾದಾನ ಮಾಡದ ಅಪ್ಪ: ಟ್ವೀಟ್ ವೈರಲ್
Team Udayavani, Feb 6, 2019, 7:18 AM IST
ಪಶ್ಚಿಮ ಬಂಗಾಳದಲ್ಲಿ ನಡೆದ ಮದುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮದುವೆಯಲ್ಲಿ ತಂದೆ “ಕನ್ಯಾದಾನ’ ಪದ್ಧತಿ ನಡೆಸಲು ನಿರಾಕರಿಸಿದ್ದಾರೆ.
“ಹಸ್ತಾಂತರ ಮಾಡಲು ನಮ್ಮ ಮಗಳು ಆಸ್ತಿಯಲ್ಲ ‘ ಎಂದು ಅವರು ಹೇಳಿದ್ದಾರೆ. ಜೊತೆಗೆ ಮದುವೆಯಲ್ಲಿ ಪಾಲ್ಗೊಂಡಿದ್ದ ಪುರೋಹಿತರೆಲ್ಲರೂ ಮಹಿಳೆಯರೇ ಎಂಬುದು ಮತ್ತೂಂದು ವಿಶೇಷ. ಈ ಮದುವೆ ಕುರಿತು ಆಸ್ಮಿತಾ ಘೋಷ್ ಎಂಬವರು ಫೋಟೊ ಮತ್ತು ಬರಹದೊಂದಿಗೆ ಟ್ವೀಟ್ ಮಾಡಿದ್ದರು.
ಪುರೋಹಿತರು ವಧುವನ್ನು ಪರಿಚಯಿಸುವಾಗಲೂ ತಾಯಿಯ ಹೆಸರನ್ನೇ ಮೊದಲು ಹೇಳಿದರು ಎಂದು ಬರೆದಿದ್ದರು. ಇದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿ, ಜಾಲತಾಣಿಗರು ಈ ಮದುವೆಯನ್ನು “ಪ್ರಗತಿಪರ ಮತ್ತು ಅನುಕರಣೀಯ’ ಎಂದು ಕರೆದಿದ್ದಾರೆ.