ಗರ್ಭಿಣಿ ಬಿಯಾನ್ಸೆ ಫೋಟೋ ಚೀಸ್ ಮೂರ್ತಿಯಾದಾಗ!
Team Udayavani, Apr 1, 2017, 5:22 AM IST
ಅಮೆರಿಕದ ಪ್ರಖ್ಯಾತ ಗಾಯಕಿ ಬಿಯೋನ್ಸೆ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಸುದ್ದಿಯಾಗುವುದು ಮಾಮೂಲಿ. ಒಮ್ಮೆ ವಿಚಿತ್ರ ಹಾಡು, ವಿಭಿನ್ನ ನೃತ್ಯ, ಕೆಲವೊಮ್ಮೆ ಆಕರ್ಷಕ ಭಂಗಿ ಯಲ್ಲಿ ಪೋಸ್ ನೀಡುವ ಬಿಯೋನ್ಸೆ ಈಗ ಗರ್ಭಿಣಿ. ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ಈ ತಾರೆ, ಇತ್ತೀಚೆಗೆ ತಾನು ಗರ್ಭಿಣಿ ಎಂಬು ದನ್ನು ತೋರಲು ಬಿಕಿನಿ ಧರಿಸಿ ಪೋಸು ನೀಡಿದ್ದ ಫೋಟೋ ಭಾರೀ ವೈರಲ್ ಆಗಿತ್ತು. ಈಗ ಅದೇ ಭಂಗಿಯ ಬೆಣ್ಣೆಯ ಮೂರ್ತಿ ಫೋಟೋ ವೈರಲ್ ಆಗುವ ಸರದಿ. ಹೊಟ್ಟೆ ಮೇಲೆ ಕೈ ಇರಿಸಿಕೊಂಡು ಕುಳಿತ ಭಂಗಿ ಯಲ್ಲಿ ಗರ್ಭಿಣಿ ಬಿಯೋನ್ಸೆ ತೆಗೆಸಿಕೊಂಡಿದ್ದ ಆ ಫೋಟೋ ಈಗ ಬೆಣ್ಣೆಯ ಮೂರ್ತಿ ಯಾಗಿದೆ. ಚೀಸ್ನ ಶಿಲ್ಪಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತ ರಾಗಿರುವ ಡೇವಿಡ್ ಬ್ರಾಡ್ಲಿ ಈ ಮೂರ್ತಿ ರೂಪಿಸಿದ್ದಾರೆ.
ವಾರಾಂತ್ಯ ಲಂಡನ್ನಲ್ಲಿ ಇ20 ಚೀಸ್ ಕಾರ್ವಿಂಗ್ ಚಾಂಪಿಯನ್ಶಿಪ್ಗಾಗಿ ಸಿದ್ಧವಾಗಿದೆ. 20 ಕಿಲೋ ಚೀಸ್ ಬಳಸಿ ಈ ಮೂರ್ತಿ ರೂಪಿಸಲು ತಗುಲಿರುವುದು 28 ತಾಸು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ