ಮಾನವ ಮುಖ ಹೋಲುವ ಬೆಕ್ಕುಗಳ ತಳಿ ಅಭಿವೃದ್ಧಿ
Team Udayavani, Dec 7, 2019, 11:48 PM IST
ಮಾನವನ ಮುಖವನ್ನೇ ಹೋಲುವ ಬೆಕ್ಕುಗಳ ವಿಡಿಯೋವನ್ನು ಬೆಕ್ಕು ಪ್ರೇಮಿಯೊಬ್ಬರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಬೆಕ್ಕುಗಳನ್ನು ನೋಡಿ ಜಾಲತಾಣಿಗರು ಚಕಿತರಾಗಿದ್ದಾರೆ. ರಷ್ಯಾದ ಬೆಕ್ಕು ತಜ್ಞೆ ತಾತ್ಯಾನ ರಸ್ತೋರುYವ 44) ಈ ವಿಡಿಯೋವನ್ನು ಸಿದ್ಧಪಡಿಸಿದ್ದಾರೆ. 2002ರಿಂದ ಬೆಕ್ಕುಗಳ ತಳಿ ಅಭಿವೃದ್ಧಿಯಲ್ಲಿ ನಿರತವಾಗಿರುವ ಅವರು ನಿರ್ದಿಷ್ಟ ಬಗೆಯ ಬೆಕ್ಕುಗಳ ತಳಿಗಳನ್ನು ಬಳಸಿ ಈ ಮಾನವನ ಮುಖ ಹೋಲುವ ಬೆಕ್ಕುಗಳನ್ನು ಅಭಿವೃದ್ಧಿಪಡಿಸಿದ್ದಾರೆ. 2004ರಲ್ಲಿ ನಾನು ಮೈನ್ ಕೋನ್ಸ್ ತಳಿ ಅಭಿವೃದ್ಧಿ ಮಾಡಲು ಆರಂಭಿಸಿದೆ. ಅವುಗಳಲ್ಲಿ ಬೆಕ್ಕುಗಳನ್ನು ಆಯ್ದು ಈ ರೀತಿಯ ಬೆಕ್ಕುಗಳ ಜನನವಾಗುವಂತೆ ಮಾಡಿದೆ ಎಂದಿದ್ದಾರೆ. ಇವರು ಅಭಿವೃದ್ಧಿ ಮಾಡುವ ಬೆಕ್ಕುಗಳಿಗೆ ಭಾರಿ ಡಿಮ್ಯಾಂಡ್ ಅಂತೆ.