ಜನರಿಗೆ ರುಚಿಸದ ವಿಕ್ಷಿಪ್ತ ಮದುವೆ
Team Udayavani, Aug 1, 2019, 6:26 PM IST
ವಿಕ್ಷಿಪ್ತ ರೀತಿಯಲ್ಲಿ ಮದುವೆಯಾಗಿ ಅದನ್ನು ಜಲತಾಣಗಳಲ್ಲಿ ಪೋಸ್ಟ್ ಮಾಡುವ ಟ್ರೆಂಡ್ ಈಗ
ಹಳೆಯದಾಗಿದೆ. ಹಾಗಾಗಿ ಹೊಸತನ್ನೇನಾದರೂ ಹುಟ್ಟುಹಾಕಬೇಕಲ್ಲವೇ? ಬ್ರಿಟನ್ನ ಮಹಿಳೆಯೊಬ್ಬರು ಹೀಗೆ ವಿಕ್ಷಿಪ್ತ ರೀತಿಯ ಮದುವೆಯಾಗಿದ್ದಾರೆ. ಆದರೆ ಜನರು ಅದನ್ನು ಇಷ್ಟಪಟ್ಟಿಲ್ಲ . ಈ ಕುರಿತು ಆಶ್ಚರ್ಯವನ್ನೂ ಸೂಚಿಸಿಲ್ಲ. ಬದಲಾಗಿ ಟೀಕೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಈಕೆ ಮದುವೆಯಾಗಿದ್ದಾದರೂ ಹೇಗೆ ಎನ್ನುತ್ತೀರಾ? ಆಕೆ ತನ್ನ ಮುದ್ದಿನ ಸಾಕು ನಾಯಿಯನ್ನೇ ಮದುವೆಯಾಗಿದ್ದಳೆ. ತನ್ನ ಮದುವೆಯನ್ನು ಖ್ಯಾತ ಟೀವಿ ವಾಹಿನಿಯಲ್ಲಿ ನೇರಪ್ರಸಾರ ನೀಡಿದ್ದಾಳೆ. “ಈ ನಾಯಿ ನನಗೆ ಸಿಗುವ ಮುನ್ನ ನಾನು ಖಿನ್ನಳಾಗಿದ್ದೆ. ಇದು ಸಿಕ್ಕ ಬಳಿಕವೇ ನನಗೆ ಮರಳಿ ಜೀವನ ಸಿಕ್ಕಿದ್ದು’ ಎಂದು ಆಕೆ ಹೇಳಿದ್ದಾಳೆ.