ಆ್ಯಂಟೆನಾದಲ್ಲಿ ನೇತಾಡಿ ಹಕ್ಕಿ ಕಬಳಿಸಿದ ಹೆಬ್ಬಾವು!
Team Udayavani, Feb 23, 2019, 6:55 AM IST
ಹೆಬ್ಬಾವುಗಳು ಕಮೋಡ್ಗಳಲ್ಲಿ ಕಾರಿನ ಎಂಜಿನ್ ಒಳಗೆ ಸೇರಿದ್ದ ಸುದ್ದಿಗಳನ್ನು ನೀವು ಓದಿರುತ್ತೀರಿ. ಆ ಘಟನೆಗಳು ಆಶ್ಚರ್ಯ ತರಿಸಿದರೂ ತೀರಾ ಅಸ್ವಾಭಾವಿಕ ಎಂದು ನಿಮಗೆ ಅನಿಸಿರಲಾರವು. ಆಸ್ಟ್ರೇಲಿಯಾದ ಕಿಂಗ್ಸ್ ಕ್ಲಿಫ್ ನ ಮನೆಯೊಂದರ ಮೇಲೆ ನಿಲ್ಲಿಸಿದ್ದ ಟೀವಿ ಆ್ಯಂಟೆನಾದಲ್ಲಿ ದೈತ್ಯ ಹೆಬ್ಬಾವೊಂದು ಜೋತಾಡುತ್ತಿದ್ದ ದೃಶ್ಯವನ್ನು ಮನೆಯ ಮಾಲೀಕರಾದ ಕ್ಯಾಥಿ ಗಾಲ್ ಸೆರೆಹಿಡಿದಿದ್ದಾರೆ.
ಆ್ಯಂಟೆನಾದಿಂದ ಜೋತಾಡುತ್ತಲೇ ಪಕ್ಷಿಯೊಂದನ್ನು ಹಾವು ಕಬಳಿಸುತ್ತಿರುವ ದೃಶ್ಯ ಎಂಥವರಿಗೂ ಭಯ ಹುಟ್ಟಿಸುವಂತಿದೆ. ಕ್ಯಾಥಿ ಹೇಳುವಂತೆ ಸುಮಾರು ಒಂದೂವರೆ ಗಂಟೆಗಳ ಕಾಲ ಆ ಹೆಬ್ಬಾವು ಅದೇ ಸ್ಥಿತಿಯಲ್ಲಿ ನೇತಾಡುತ್ತಿತ್ತಂತೆ. ಈ ವಿಡಿಯೋವನ್ನು ಕ್ಯಾಥಿ ಫೇಸ್ ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗ ಈ ಭಯಂಕರ ದೃಶ್ಯ ಭಾರಿ ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ