11 ವರ್ಷ ಬಳಿಕ ಮನೆಗೆ ಮರಳಿದ ಮಾರ್ಜಾಲ!
Team Udayavani, Aug 27, 2019, 11:59 AM IST
ನ್ಯೂಯಾರ್ಕ್ನ ಮ್ಯಾಗಿ ವೆಲ್ಜ್ ಎಂಬ ಮಹಿಳೆಯ ಮನೆಯಿಂದ ಕಾಣೆಯಾಗಿದ್ದ ಸಾಕು ಬೆಕ್ಕೊಂದು ಬರೋಬ್ಬರಿ 11 ವರ್ಷಗಳ ನಂತರ ಅವರ ಮನೆಗೆ ಪುನಃ ಹಿಂದಿರುಗಿದೆ. ಅದಕ್ಕೆ ಕಾರಣವಾಗಿದ್ದು, ನ್ಯೂಯಾರ್ಕ್ ನಗರದಲ್ಲಿರುವ ಡಚಸ್ ಕಂಟ್ರಿ ಎಸ್ಪಿಸಿಎ ಎಂಬ ಪ್ರಾಣಿಗಳ ಆರೈಕೆ ಕೇಂದ್ರದ ಸಿಬ್ಬಂದಿ ಒ’ಕಾರ್ನೆಲ್ ಅವರಿಂದ.
ಸುಮಾರು 3 ವರ್ಷಗಳ ಹಿಂದೆ ಕಾರ್ನೆಲ್ ಅವರ ಮನೆಯ ಸುತ್ತಲೂ ಈ ಬೆಕ್ಕು ಓಡಾಡಿಕೊಂಡಿತ್ತಂತೆ. ಆದರೆ, ಇತ್ತೀಚೆಗೆ ಇದನ್ನು ಹತ್ತಿರದಿಂದ ಗಮನಿಸಿದಾಗ ಅದರ ಬೆನ್ನ ಮೇಲೆ
ಮೈಕ್ರೋ ಚಿಪ್ ಇರುವುದು ಗೊತ್ತಾಗಿದೆ. ಚಿಪ್ನೊಳಗಿನ ಮಾಹಿತಿಯಲ್ಲಿ ಬೆಕ್ಕಿನ ಹೆಸರು, ಮಾಲೀಕರ ವಿಳಾಸವೂ ಪತ್ತೆಯಾಗಿದ್ದರಿಂದ ಅದನ್ನು ಮಾಲೀಕರಿಗೆ ತಲುಪಿಸಲು ಸಾಧ್ಯವಾಗಿದೆ.