ಲಂಚದ ರೂಪದಲ್ಲಿ ಎಮ್ಮೆ ಕೊಡಲು ಮುಂದಾದ ಮಹಿಳೆ

Team Udayavani, Jan 10, 2020, 7:21 AM IST

ಭ್ರಷ್ಟಾಚಾರ ನಿರ್ಮೂಲನೆಯಂಥ ಮಾತುಗಳು ನಮ್ಮ ದೇಶದಲ್ಲಿ ಬರೀ ಮಾತಲ್ಲೇ ಉಳಿಯುತ್ತವೆ. ಕೊಟ್ಟ ಲಂಚ ಸಾಕಾಗಲಿಲ್ಲ ಎಂದಿದ್ದಕ್ಕೆ ಮಧ್ಯಪ್ರದೇಶದ ಮಹಿಳೆಯೊಬ್ಬರು ಲಂಚದ ರೂಪವಾಗಿ ತಹಶೀಲ್ದಾರ್‌ ಕಚೇರಿಗೆ ಎಮ್ಮೆಯನ್ನೇ ಕರೆದೊಯ್ದಿದ್ದಾರೆ. ಕಚೇರಿ ಆವರಣದಲ್ಲಿ ಎಮ್ಮೆಯನ್ನು ಕಾಣುತ್ತಲೇ ಅಲ್ಲಿ ದೊಡ್ಡ ಕೋಲಾಹಲ ನಡೆದಿದೆ.

ಅವರ ಜಮೀನಿನ ಖಾತೆ ವರ್ಗಾವಣೆಗಾಗಿ ಮಹಿಳೆಗೆ 10,000 ರೂ. ಲಂಚ ಕೇಳಲಾಗಿತ್ತಂತೆ. ‘ನಾನು ಅಷ್ಟೂ ಹಣವನ್ನು ನೀಡಿದ ಮೇಲೂ ಮತ್ತೆ ಲಂಚ ಕೇಳಿದರು. ಹಣವಿಲ್ಲದ ಕಾರಣ ನನ್ನ ಎಮ್ಮೆಯನ್ನೇ ಲಂಚದ ರೂಪದಲ್ಲಿ ಕೊಡಲು ಮುಂದಾಗಿದ್ದೇನೆ’ ಎಂದು ಮಹಿಳೆ ಹೇಳಿದ್ದಾರೆ. ಅದರೆ ಅವರ ಖಾತೆ ವರ್ಗಾವಣೆಯನ್ನು ನವೆಂಬರ್‌ನಲ್ಲಿಯೇ ಮಾಡಲಾಗಿದೆ. ಮಹಿಳೆ ಏನೋ ಸಂಚು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ