ತಲೆಗೂದಲು ಕತ್ತರಿಸುವ ವೇಳೆ ಮಕ್ಕಳು ಅತ್ತರೆ ಹೆಚ್ಚು ದುಡ್ಡು!
Team Udayavani, Jan 3, 2017, 10:09 AM IST
ತಲೆಗೂದಲು ಕತ್ತರಿಸ್ತಾರೆ ಅಂತ ಗೊತ್ತಾದ್ರೆ ಸಾಕು.. ಮಕ್ಕಳು ಗೋಳ್ಳೋ… ಅಂತ ಅಳ್ತವೆ. ಅವುಗಳನ್ನು ಸಲೂನ್ಗೆ ಕರೆದೊಯ್ಯೋದು ಒಂದು ದೊಡ್ಡ ಸಾಹಸ! ಮಕ್ಕಳು ಹೀಗೆ ಅಳ್ತಾ ಇದ್ರೆ ಕ್ಷೌರಿಕನಿಗೂ ಬೇಜಾನ್ ಕಿರಿಕಿರಿ.. ಮಕ್ಕಳ ಇಂತಹ ಕಿರಿಕ್ ಗೆ ಬೇಸತ್ತ ಆಸ್ಟ್ರೇಲಿಯಾದ ಕ್ಷೌರದಂಗಡಿಯಲ್ಲಿ ಡಿಫರೆಂಟ್ ಪ್ಲಾನ್ ಮಾಡಲಾಗಿದೆ. ಅದೇನಪ್ಪಾ ಅಂದ್ರೆ, ಮಕ್ಕಳು ಕ್ಷೌರದ ವೇಳೆ ಅತ್ತರೆ ಹೆತ್ತವರು ಹೆಚ್ಚು ದುಡ್ಡು ಕೊಡ್ಬೇಕು! ಇದಕ್ಕಾಗಿ ಪ್ರತ್ಯೇಕ ಬೋರ್ಡ್ ಒಂದನ್ನೂ ತೂಗು ಹಾಕಲಾಗಿದೆಯಂತೆ. ಕ್ಷೌರಕ್ಕೆ ತೆಗೆದುಕೊಳ್ಳುವ ಹಣದೊಂದಿಗೆ ಹೆಚ್ಚುವರಿ ಸುಮಾರು 680 ರೂ. ಪಾವತಿ
ಮಾಡಬೇಕು ಅನ್ನೋದು ಕ್ಷೌರಿಕನ ತಾಕೀತು.. ಈ ವಿಚಾರ ಈಗ ಹೆತ್ತವರ ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ. ಮಕ್ಕಳು ಅಳ್ಳೋದಂತೆ ಇರೋದಕ್ಕೆ ಏನ್ ಮಾಡೋದಪ್ಪಾ ಅಂತ ತಲೆಕೆರೆದುಕೊಳ್ತಿದ್ದಾರಂತೆ!