ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿ ಆನೆಗಳಿಗೆ ಜಾಕೆಟ್!
Team Udayavani, Feb 5, 2017, 4:05 AM IST
ಆನೆಗೆ ಚಡ್ಡಿ ಹೊಲಿಯೋಕಾಗುತ್ತಾ ಅನ್ನೋ ಮಾತೊಂದಿದೆ. ಆದ್ರೂ ಕೆಲ ಸರ್ಕಸ್ ಕಂಪನಿಗಳಲ್ಲಿ ಆನೆಗಳಿಗೆ ಬಟ್ಟೆ ತೊಡಿಸೋದನ್ನು ನೋಡಿರ್ತಿರಿ. ಆದರೆ ವನ್ಯಜೀವಿ ಸಂರಕ್ಷಣಾಲಯದಲ್ಲಿರೋ ಆನೆಗಳಿಗೆ ಬಟ್ಟೆ ಹೊಲಿತಾರೆ ಅಂದ್ರೆ ಒಂದು ಕ್ಷಣ ಅಚ್ಚರಿಯಾಗೋದು ಸಹಜ. ಉತ್ತರ ಪ್ರದೇಶದ ಮಥುರಾಧಿದಲ್ಲಿರುವ ವನ್ಯಜೀವಿ ಸಂರಕ್ಷಣಾಲಯದ ಆನೆಗಳಿಗೆ ಪ್ಯಾಂಟ್, ಜಾಕೆಟ್, ರಾತ್ರಿ ಉಡುಗೆಗಳು, ಹೊದಿಕೆಗಳನ್ನು ತಯಾರಿಸಲಾಗಿದೆ!. ಇತ್ತೀಚೆಗೆ ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ ತೀವ್ರ ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಆನೆಗಳನ್ನು ಬೆಚ್ಚಾಗಿರುವಂತೆ ನೋಡಿಕೊಳ್ಳಲು ಹೊದಿಕೆ ತಯಾರಿಸಲಾಗಿದೆ.
ಸಂರಕ್ಷಣಾಲಯಕ್ಕೆ ಸಮೀಪದ ಹಳ್ಳಿಯೊಂದರ ಕೆಲ ಮಹಿಳೆಯರು ಮತ್ತು ಅಲ್ಲಿನ ಕೆಲ ಸಿಬ್ಬಂದಿ ಉಡುಗೆಗಳನ್ನು ಸಿದ್ಧಪಡಿಸಿದ್ದಾರೆ. ಸುಮಾರು ಒಂದು ತಿಂಗಳು ಸಮಯದಲ್ಲಿ ಮೂರು ಆನೆಗಳಿಗೆ ಉಡುಗೆ ತಯಾರಿಸಲಾಗಿದೆ ಎನ್ನುತ್ತಾರೆ ವಸ್ತ್ರ ವಿನ್ಯಾಸಗಾರ್ತಿ ಆಶಾ.