ಪರೀಕ್ಷೆ ಕಾಪಿ ತಡೆಯಲು ಪೇಪರ್ ಹ್ಯಾಟ್ ಭದ್ರತೆ!
Team Udayavani, Jan 5, 2017, 6:50 AM IST
ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನು ತಡೆಯಲು ಮಾಸ್ಟ್ರೆಗಳು ಏನೆಲ್ಲಾ ಕಸರತ್ತು ಮಾಡ್ತಾನೇ ಇರ್ತಾರೆ. ಆದ್ರೆ ಮಾಸ್ಟ್ರೆ ಚಾಪೆ ಕೆಳಗೆ ನುಸುಳಿದರೆ, ಕಾಪಿ ಪ್ರಿಯರು ರಂಗೋಲಿ ಕೆಳಗೆ ನುಸಿಯೋದಲ್ಲಿ ಚಾಣಾಕ್ಷರು. ಹೀಗಾಗಿಯೇ ಮಾಸ್ಟ್ರೆ ಏನೆಲ್ಲಾ ಉಪಾಯ ಮಾಡಿದ್ರೂ, ವಿದ್ಯಾರ್ಥಿಗಳು ತಮ್ಮ ಹಳೆ ಚಟ ಬಿಡದೆ, ಕಾಪಿ ಹೊಡೆದೇ ಸೈ ಅನ್ನಿಸಿಕೊಳ್ತಾರೆ.
ಆದರೆ ಚೀನಾದ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಈ ಕಾಪಿ ತಡೆಯಲು ಹೊಸ ಉಪಾಯ ಕಂಡುಹಿಡಿದಿದ್ದಾರೆ. ಅದೇನೆಂದರೆ ಪರೀಕ್ಷೆಗೆ ಕುರಿತ ಎಲ್ಲಾ ಮಕ್ಕಳ ತಲೆಗೂ ಹಳೆಯ ದಿನಪತ್ರಿಕೆಯ ಟೋಪಿ ಮಾಡಿ ಹಾಕುವುದು. ಕುದುರೆಗೆ ಕಣ್ಣಿಗೆ ಪಟ್ಟಿ ಕಟಾ¤ರಲ್ಲಾ ಹಾಗೆ. ಈ ಉಪಾಯ ಭರ್ಜರಿ ಫಲ ಕೊಟ್ಟಿದೆಯಂತೆ.