ನಾಯಿ-ಬೆಕ್ಕು ದತ್ತು ಪಡೆಯಲು ಈಗ ಪೈಪೋಟಿ

ಹೌದಾ ಮಾರಾಯ್ರೆ?

Team Udayavani, Nov 27, 2019, 8:21 AM IST

ಕೆಲವೊಂದು ಸಂದರ್ಭಗಳಲ್ಲಿ ನಾಯಿ ಮತ್ತು ಬೆಕ್ಕು ನಡುವಿನ ಸಂಬಂಧ ಅಷ್ಟಕ್ಕಷ್ಟೇ. ಆದರೆ ಇಲ್ಲಿ ವಿವರಿಸ ಹೊರಟಿರುವ ವಿಚಾರ ಯಾವತ್ತಿಗಿಂತ ಭಿನ್ನವಾದದ್ದು. ಈ ಘಟನೆ ನಡೆದದ್ದು ಕೆನಡಾದ ಒಂಟಾರಿಯೋದಲ್ಲಿ. ಎರಡು ವರ್ಷದ ನಾಯಿ ಸಣ್ಣ ಬೆಕ್ಕಿನ ಮರಿಗಳನ್ನು ರಕ್ಷಿಸಿದೆ.

ಆ ಫೋಟೋ ಈಗ ಜಗತ್ತಿನಾದ್ಯಂತ ಮೆಚ್ಚುಗೆ ಮತ್ತು ವೈರಲ್‌ ಆಗಿದೆ. ಮೂರು ಡಿಗ್ರಿ ಸೆಲ್ಷಿಯಸ್‌ ಚಳಿಯಲ್ಲಿ ನಾಯಿ ನಆಯ್ತೇನ್ರೀಗುತ್ತಾ ಇದ್ದುದನ್ನು ಪ್ರಾಣಿ ರಕ್ಷಣಾ ಕಾರ್ಯಕರ್ತರೊಬ್ಬರು ನೋಡಿದರು. ಛೇ ಹೀಗೂ ಆಯ್ತಲ್ಲ ಎಂಬ ವ್ಯಥೆ ಅವರದ್ದು. ಇನ್ನೇನು ನಾಯಿಯನ್ನು ಎತ್ತಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಅದರ ಕೆಳಗೆ ಕಪ್ಪು ಬಣ್ಣದ ಐದು ಬೆಕ್ಕಿನ ಮರಿಗಳು ಇದ್ದವು.

ತಾನು ಚಳಿಯಿಂದ ನಡುಗುತ್ತಿದ್ದುದಲ್ಲದೆ, ಮತ್ತೆ ಐದು ಕುಟುಕು ಜೀವಗಳನ್ನೂ ಅದು ಕಾಪಾಡಿಕೊಂಡಿತ್ತು. ಕೂಡಲೇ ಮರಿಯಾಂ ಆರ್ಮ್ಸ್ಟ್ರಾಂಗ್‌ ಅದನ್ನು ರಕ್ಷಣಾ ಕೇಂದ್ರಕ್ಕೆ ಕರೆತಂದರು. ಅಲ್ಲಿ ಅವುಗಳಿಗೆ ಬೆಚ್ಚಗಿನ ವ್ಯವಸ್ಥೆ ಮಾಡಲಾಯಿತು. ಫೋಟೋ ಮತ್ತು ವಿವರಣೆಯನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ವಿಶ್ವದ 30 ಮಂದಿ ಅವುಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರಂತೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ