ಮನೆ ಕಿಚ್ಚು ಹಾಕಿದ ಪ್ರೀತಿಯ ನಾಯಿ

ಹೌದಾ ಮಾರಾಯ್ರೇ?

Team Udayavani, Dec 5, 2019, 12:38 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬಹುತೇಕ ನಗರವಾಸಿಗಳಲ್ಲಿ ನಾಯಿ ನಂಬಿಕಸ್ಥ ಮತ್ತು ಕುಟುಂಬದ ಸದಸ್ಯನಂತೆಯೇ ಇರುತ್ತದೆ. ಮುದ್ದಿನಿಂದ ಸಾಕಿದ ನಾಯಿ ಒಡೆಯ ಹಾಗೂ ಮನೆಯವರ ಜೀವ ಉಳಿಸಿದ ಹಲವು ನಿದರ್ಶನಗಳು ಈಗಾಗಲೇ ವರದಿಯಾಗಿವೆ. ಇಲ್ಲಿ ಹೇಳ ಹೊರಟಿರುವುದು ಬೇರೆಯೇ ಕಥೆ.

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ನಾಯಿ ಮೈಕ್ರೋವೇವ್‌ ಒವೆನ್‌ ಅನ್ನು ಹಠಾತ್‌ ಆಗಿ ಆನ್‌ ಮಾಡಿದ್ದರಿಂದ ಮನೆಗೇ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಎಸೆಕ್ಸ್‌ನ ಮನೆಯಲ್ಲಿ ನಾಯಿ ಒಂದೇ ಇತ್ತು. ಕುಟುಂಬ ಸದಸ್ಯರು ಯಾರೂ ಇರಲಿಲ್ಲ. ಅಡುಗೆ ಕೋಣೆಯ ಕಡೆಗೆ ಹೋದ ನಾಯಿಯಿಂದಾಗಿ ಅಚಾನಕ್‌ ಆಗಿ ಒವೆನ್‌ ಸ್ವಿಚ್‌ ಆನ್‌ ಆಯಿತು.

ಅದರಲ್ಲಿ ಇರಿಸಲಾಗಿದ್ದ ಬ್ರೆಡ್‌ ರೋಲ್‌ಗ‌ಳು ಫ್ರೈ ಆಗಿ ಬೆಂಕಿಯ ಕಿಡಿ ಹೊರಸೂಸಲಾರಂಭಿಸಿತು. ಅದೇ ಸಂದರ್ಭದಲ್ಲಿ ಹೊರಗಿದ್ದ ಮನೆ ಮಾಲೀಕನ ಮೊಬೈಲ್‌ಗೆ ಘಟನೆಯ ಬಗ್ಗೆ ಅಲರ್ಟ್‌ ಬಂದಿತು. ಕೂಡಲೇ ಆತ ಅಗ್ನಿಶಾಮಕ ಸಿಬಂದಿಗೆ ಮಾಹಿತಿ ನೀಡಿದ. ಕೂಡಲೇ ಕಾರ್ಯತತ್ಪರರಾದ ಅವರು ಬೆಂಕಿಯನ್ನು ನಂದಿಸಿದರು. ಅಗ್ನಿ ಶಾಮಕ ಸಿಬಂದಿ ಕೂಡ ಘಟನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಹೀಗೂ ಆಗಲು ಸಾಧ್ಯವಿದೆಯೇ ಎಂದು ಮಾತನಾಡಿಕೊಂಡರಂತೆ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...