ಆಹಾರದಲ್ಲಿ ಮಾನವನ ಹಲ್ಲು ನೋಡಿ ಬೆಚ್ಚಿದ ದಂಪತಿ
ಹೌದಾ ಮಾರಾಯ್ರೆ !
Team Udayavani, Mar 2, 2020, 11:16 AM IST
ಬ್ರಿಟನ್ನ ದಂಪತಿಯೊಂದು ಚೀನೀ ತಿನಿಸು ತಿನ್ನಬೇಕು ಎಂದು ತುಂಬಾ ಆಸೆಯಿಂದ ಅಲ್ಲಿನ ಖ್ಯಾತ ರೆಸ್ಟೋರೆಂಟ್ವೊಂದರಿಂದ ಚೀನಿ ಖಾದ್ಯಗಳನ್ನು ತರಿಸಿಕೊಂಡರೆ ಅದು ದುಃಸ್ವಪ್ನವಾಗಿ ಬದಲಾಗಿದೆ. ಅವರು ತರಿಸಿದ್ದ ಪೋರ್ಕ್ ಕರ್ರಿಯಲ್ಲಿ ಮಾನವನ ಹಲ್ಲು ಪತ್ತೆಯಾಗಿದೆ. ಅದನ್ನು ನೋಡಿ ಅವರು ಬೆಚ್ಚಿಬಿದ್ದಿದ್ದಾರೆ.
ಆಹಾರದಲ್ಲಿ ಮಾನವನ ಹಲ್ಲು ದೊರೆಯುತ್ತದೆ ಎಂದರೆ ಆ ಹೊಟೇಲ್ನ ನೈರ್ಮಲ್ಯ ನಿರ್ವಹಣೆಯ ಮಟ್ಟ ಎಷ್ಟಿರಬಹುದು ಎಂದು ಅವರು ಚಿಂತಿತರಾಗಿದ್ದಾರೆ. ಕೂಡಲೇ ಹೊಟೇಲ್ಗೆ ಈ ಕುರಿತು ದೂರು ನೀಡಿದ್ದಾರೆ. ಆ ಹಲ್ಲು ಆಹಾರದಲ್ಲಿ ಹೇಗೆ ಸೇರಿತು ಎಂದು ನಮಗೆ ಗೊತ್ತಿಲ್ಲ. ಅದು ಹೊಟೇಲ್ನಲ್ಲಿ ಸೇರಿಲ್ಲ. ಈ ಕುರಿತು ನಮಗೆ ಮಾಹಿತಿಯೇ ಇಲ್ಲ ಎಂದು ರೆಸ್ಟೋರೆಂಟ್ ಆಡಳಿತವು ತಿಪ್ಪೆ ಸಾರಿದೆ.