ಮನೆ ಬಾಗಿಲು ಬಡಿದ 10 ಅಡಿ ಉದ್ದದ ಮೊಸಳೆ!

Team Udayavani, Feb 15, 2019, 4:37 AM IST

ಬಾಗಿಲನ್ನು ಯಾರಾದರೂ ಜೋರಾಗಿ ಬಡಿಯುತ್ತಿದ್ದರೆ ಒಳಗಿದ್ದವರಿಗೆ ಆತಂಕವಾಗುವುದು ಸಹಜ. ಅಮೆರಿಕದ ಫ್ಲೊರಿಡಾದಲ್ಲಿ ಮಹಿಳೆಯೊಬ್ಬರಿಗೆ ಇದೇ ಅನುಭವವಾಗಿದೆ. ಬಾಗಿಲಾಚೆ ನಿಂತಿದ್ದ ಆಗುಂತಕನ ಬಗ್ಗೆ ತಿಳಿದಾಗ ಅವರಿಗೆ ಭೂಮಿಯೇ ಬಾಯ್ಬಿಟ್ಟಂತೆ ಆಗಿದೆ. ಇಲ್ಲಿಯ ಮೆರ್ರಿಟ್‌ ಐಲ್ಯಾಂಡ್‌ನ‌ ಗೆರಿ ಸ್ಟಾಪಲ್ಸ್‌ ಎಂಬ ಮಹಿಳೆ ಮನೆಯೊಳಗೆ ಕೆಲಸಕಾರ್ಯದಲ್ಲಿ ಮಗ್ನರಾಗಿದ್ದಾಗ, ಯಾರೋ ಜೋರಾಗಿ
ಬಾಗಿಲು ತಟ್ಟಲು ಆರಂಭಿಸಿದರು. 

ಸದ್ದಿಗೆ ಆತಂಕಗೊಂಡ ಗೆರಿ ಭಯದಿಂದಲೇ ಬಾಗಿಲ ಬಳಿ ಹೋಗಿ ಕಿಟಕಿಯಿಂದ ಅಣಕಿ ನೋಡಿದಾಗ 10 ಅಡಿ ಉದ್ದದ ದೈತ್ಯ ಮೊಸಳೆ ಅವರಿಗೆ ಕಂಡಿದೆ. ಇನ್ನೇನು ಅದು ಬಾಗಿಲು ಮುರಿದು ಒಳಗೆ ಬರುತ್ತದೆ ಎಂದು ತಿಳಿದ ಅವರು ಮಹಡಿಗೆ ಹೋಗಿ ನೆರೆಹೊರೆಯವರಿಗೆ ಮೊಸಳೆ ಬಂದಿರುವುದಾಗಿ ಕೂಗಿ ಹೇಳಿದ್ದಾರೆ. ನೆರೆಮನೆಯವರು ಮೊಸಳೆಯನ್ನು ಓಡಿಸಲು ಪ್ರಯತ್ನಪಟ್ಟರೂ ಆಗದೇ ಇದ್ದಾಗ ವನ್ಯಜೀವಿ ಇಲಾಖೆಗೆ ಕರೆ ಮಾಡಿ ಅವರ ನೆರವು ಪಡೆದುಕೊಂಡಿದ್ದಾರೆ. ದೈತ್ಯ ಮೊಸಳೆ ಮಾನವರಿಗೆ ಅಪಾಯ ತಂದೊಡ್ಡುವ ಹಂತ ತಲುಪಿದ್ದ ಕಾರಣ ಅದನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ವನ್ಯಜೀವಿ ಇಲಾಖೆ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ