ತಿಗಣೆಗಳ ಉಪಟಳ ತಡೆಯಲು ಹಾಟ್ಲೈನ್!
Team Udayavani, Feb 24, 2020, 9:55 AM IST
ತಾಳಲಾರೆ ತಿಗಣೆಯಾ ಕಾಟವಾ… ಹಾಡನ್ನು ನೀವು ಕೇಳಿರಬಹುದು. ಈಗ ಆ ಹಾಡು ಹಾಡುವ ಸರದಿ ಫ್ರಾನ್ಸ್ ನಾಗರಿಕರದ್ದು! ತಿಗಣೆ ಕಾಟ, ಅವುಗಳ ಆರ್ಭಟಕ್ಕೆ ಫ್ರಾನ್ಸ್ ಅಕ್ಷರಶಃ ನಲುಗಿ ಹೋಗಿದೆ. ಇವುಗಳ ಉಪಟಳ ಅದೆಷ್ಟಿದೆ ಎಂದರೆ ಫ್ರಾನ್ಸ್ ಸರ್ಕಾರ ತಿಗಣೆ ವಿರೋಧಿ ಅಭಿಯಾನ ಆರಂಭಿಸಿದೆ. ಮಾತ್ರವಲ್ಲ, ಪೀಠೊಪಕರಣಗಳನ್ನು ತಿಗಣೆ ಹಾವಳಿಯಿಂದ ತಡೆಯುವುದು ಹೇಗೆ ಎಂದು ಜಾಗೃತಿ ಮೂಡಿಸಲು ಮತ್ತು ಮಾಹಿತಿ ನೀಡಲು ಪ್ರತ್ಯೇಕ ವೆಬ್ಸೈಟ್ ಆರಂಭಿಸಿದೆ.
ಅಲ್ಲದೆ, ತಿಗಣೆಗೆ ಸಂಬಂಧಿಸಿದ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಲು ಹಾಟ್ಲೈನ್ ಸಂಖ್ಯೆ ತೆರೆಯಲಾಗಿದೆ! ‘ಸೇಬಿನ ಬೀಜದ ಗಾತ್ರದ ಈ ಜೀವಿಗಳು ನಮ್ಮೆಲ್ಲರ ಮೇಲೂ ಪರಿಣಾಮ ಬೀರಬಹುದು’ ಎಂಬ ಸಾಲು ವೆಬ್ಸೈಟ್ನಲ್ಲಿ ಕಾಣಸಿಗುತ್ತದೆ. ಫ್ರಾನ್ಸ್ಗೆ ಹೆಚ್ಚು ಭೇಟಿ ನೀಡುವ ವಿದೇಶಿ ಪ್ರವಾಸಿಗರಿಂದಾಗಿ ಅಲ್ಲಿ ತಿಗಣೆ ಕಾಟ ಹೆಚ್ಚಾಗಿದೆ ಎನ್ನಲಾಗಿದೆ. ಹೀಗಾಗಿ ಪ್ರವಾಸಿಗರ ಬ್ಯಾಗ್ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಅಂದಹಾಗೆ, ಅಧ್ಯಯನ ಒಂದರ ಪ್ರಕಾರ ಒಂದು ತಿಗಣೆ ಒಂದು ರಾತ್ರಿಯಲ್ಲಿ 90 ಬಾರಿ ಕಚ್ಚುತ್ತದೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ