31,500ರೂ. ಟೀವಿಯನ್ನು 2,450 ರೂ.ಗೆ ನೀಡುತ್ತೇವೆ ಎಂದಾಗ ಏನಾಯ್ತು?

Team Udayavani, Jan 11, 2020, 7:56 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

‘ರಿಯಾಯಿತಿ ದರದಲ್ಲಿ ಮಾರಾಟ’ ಎಂಬ ಫ‌ಲಕ ನೋಡುತ್ತಿದ್ದಂತೆಯೇ ಜನರು ಆ ವಸ್ತು ತಮಗೆ ಅಗತ್ಯವಿದೆಯೋ ಇಲ್ಲವೋ ಎಂದೂ ಯೋಚಿಸದೇ ಅದನ್ನು ಕೊಳ್ಳಲು ಮುಗಿಬೀಳುತ್ತಾರೆ. ಫ್ರಾನ್ಸ್‌ನ ಮಂಟ್‌ಪೆಲ್ಲಿಯರ್‌ನ ಒಂದು ಸೂಪರ್‌ ಮಾರ್ಕೆಟ್‌ ಜಾಹೀರಾತಿನಲ್ಲಿ ರಿಯಾಯಿತಿ ದರವನ್ನು ತಪ್ಪಾಗಿ ಮುದ್ರಿಸಿ ಯಡವಟ್ಟು ಮಾಡಿಕೊಂಡಿದೆ.

31,500 ರೂ.ಗೆ ಮಾರಾಟವಾಗಬೇಕಿದ್ದ ಟೀವಿ ಬೆಲೆಯನ್ನು 2,450 ರೂ. ಎಂದು ತಪ್ಪಾಗಿ ಮುದ್ರಿಸಿದೆ. ಈ ಜಾಹೀರಾತು ಜಗಜ್ಜಾಹೀರಾಗುತ್ತಿದ್ದಂತೆಯೇ ಜನರು ಟೀವಿ ಕೊಳ್ಳಲು ಮುಗಿಬಿದ್ದಿದ್ದಾರೆ. ಅಂಗಡಿ ಮಾಲೀಕರು ಮತ್ತು ಸಿಬಂದಿ ‘ನಮ್ಮಿಂದ ಪ್ರಮಾದವಾಗಿದೆ ಕ್ಷಮಿಸಿ, ಟೀವಿಯನ್ನು ಅಷ್ಟು ಕಡಿಮೆ ಬೆಲೆಗೆ ನೀಡಲಾಗುವುದಿಲ್ಲ’ ಎಂದು ಎಷ್ಟೇ ಮನವಿ ಮಾಡಿದರೂ ಜನರು ಅಲ್ಲಿಂದ ಕದಲಲಿಲ್ಲ.

ಬದಲಾಗಿ ನಾವು ಅಷ್ಟು ದೂರದಿಂದ ನಿಮ್ಮ ಜಾಹೀರಾತು ಬಂದಿದ್ದಕ್ಕೆ ನಮಗೆ ರಿಯಾಯಿತಿ ದರದಲ್ಲಿ ಟೀವಿ ಕೊಡಲೇಬೇಕು ಎಂದು ಪಟ್ಟುಹಿಡಿದು ಕೂತರು. ಕಡೆಗೆ ಪೊಲೀಸರ ಸಹಾಯ ಪಡೆದು ಅಂಗಡಿಯನ್ನು ಖಾಲಿ ಮಾಡಬೇಕಾಯಿತು. ಕೊನೆಗೆ ಅಂಗಡಿಯನ್ನು ನಿಗದಿತ ಸಮಯಕ್ಕಿಂತ 1 ಗಂಟೆ ಮುಂಚೆಯೇ ಮುಚ್ಚಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ