ಡೇಟಿಂಗ್ ಅಂತ ಹೋಗಿ ಆಸ್ಪತ್ರೆಗೆ ದಾಖಲಾದಳು!
Team Udayavani, Mar 14, 2017, 6:46 AM IST
ಡೇಟಿಂಗ್ಗೆ ಅಂತ ಖುಷಿಯಾಗಿ ತೆರಳಿದ್ದ ಮಹಿಳೆಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಕಥೆ ಇದು. 26 ವರ್ಷ ವಯಸ್ಸಿನ ಆ್ಯನೆ ನಾಕ್ಸ್ ಇತ್ತೀಚೆಗಷ್ಟೇ ತನ್ನ 10 ವರ್ಷದ ದಾಂಪತ್ಯದಿಂದ ಹೊರಬಂದಿದ್ದಳು. ಆಕೆಗೆ ಬ್ರಾಡ್ಲಿ ವ್ಯಾನ್ ಔಟನ್ ಎಂಬಾತನೊಂದಿಗೆ ಸ್ನೇಹವಾಗಿತ್ತು. ಆತ ತನ್ನ ಬಿಎಂಡಬ್ಲ್ಯು ಕಾರ್ ಡ್ರೈವ್ ಮಾಡುವ ರೀತಿಯನ್ನು ಆಕೆಗೆ ತೋರುವ ಸಲುವಾಗಿ ಆಕೆಯನ್ನು ಡೇಟಿಂಗ್ ಕರೆದುಕೊಂಡು ಹೋಗಿದ್ದ.
ಕಾರನ್ನು ವೇಗವಾಗಿ ಓಡಿಸುವ ಭರದಲ್ಲಿ ಮರವೊಂದಕ್ಕೆ ಗುದ್ದಿದ. ನಾಕ್ಸ್ಗೆ ಬಲವಾದ ಪೆಟ್ಟುಗಳು ಬಿದ್ದು, ಆಕೆ ಮೂಛೆì ಹೋದರೆ, ಅತ್ತ ಬ್ರಾಡ್ಲಿ ಆಕೆಯನ್ನು ಬಿಟ್ಟು ಪರಾರಿಯಾದ. ಸದ್ಯ ಚೇತರಿಸಿಕೊಳ್ಳುತ್ತಿರುವ ನಾಕ್ಸ್ ತನ್ನ ಹೇರ್ ಡ್ರೆಸ್ಸರ್ ಕೆಲಸ ಕಳೆದುಕೊಂಡಿದ್ದಾಳಂತೆ. ಆಕೆಯ ಮಕ್ಕಳು ಗಾಯಗೊಂಡಿರುವ ಆಕೆಯ ಮುಖ ನೋಡಲು ಹೆದರುತ್ತಾರಂತೆ. ನನ್ನ ಜೀವನದಲ್ಲಿ ಇಂಥ ಕೆಟ್ಟ ಡೇಟಿಂಗ್ ನಡೆಯುತ್ತದೆ ಎಂದು ನಾನು ಊಹಿಸರಲಿಲ್ಲ ಎಂದು ಆಕೆ ಹೇಳಿದ್ದಾಳೆ. ಬ್ರಾಡ್ಲಿಗೆ 2 ವರ್ಷಗಳ ಜೈಲು ಶಿಕ್ಷೆಯಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್