2.87 ಲಕ್ಷ ರೂ.ಗಳ ಉಡುಗೊರೆ ಕೇಳಿದ ಬಾಲಕಿ

Team Udayavani, Nov 19, 2019, 8:00 AM IST

ಈಗಿನ ಮಕ್ಕಳ ಬೇಡಿಕೆ ಪಟ್ಟಿಯಲ್ಲಿ ಫೋನ್‌, ಐಪಾಡ್‌ ಕಡ್ಡಾಯವಾಗಿ ಇರುತ್ತವೆ. ಅಮೆರಿಕದ 10 ವರ್ಷ ವಯಸ್ಸಿನ ಬಾಲಕಿ ತನಗೆ ಕ್ರಿಸ್‌ಮಸ್‌ಗೆ ಕೊಡಿಸಬೇಕಿರುವ ವಸ್ತುಗಳನ್ನು ಪಟ್ಟಿ ಮಾಡಿ ತನ್ನ ಅಪ್ಪನ ಕೈಗಿಟ್ಟಿದ್ದಾಳೆ. ಈ ಪಟ್ಟಿ ನೋಡಿ ಅಪ್ಪ ಮೂರ್ಛೆ ಹೋಗುವುದೊಂದೇ ಬಾಕಿ.

ಪಟ್ಟಿಯಲ್ಲಿ ಹೊಸ ಐಫೋನ್‌ 11, ಆ್ಯಪಲ್‌ ಮ್ಯಾಕ್‌ಬುಕ್‌ ಏರ್‌, ಗ್ಯುಸ್ಸಿ ಸ್ಲೆ„ಡರ್‌, ಚಾನಲ್‌ ಬ್ರಾಂಡ್‌ನ‌ ಪರ್ಸ್‌, ಗೊ ಪ್ರೊ ಮುಂತಾದ ದುಬಾರಿ ವಸ್ತುಗಳನ್ನು ಕೇಳಿದ್ದಾಳೆ. ಆಕೆಯ ಕೈಬರಹದ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿರುವ ಆಕೆಯ ಅಪ್ಪ, ಮಗಳ ಬೇಡಿಕೆಯ ಒಟ್ಟು ಮೊತ್ತ 2.87 ಲಕ್ಷ ರೂ. ಎಂದು ಅಂದಾಜಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ