ಹೆಂಡತಿಯೆದುರು 62 ವರ್ಷ ಕಿವುಡ ಮೂಗನಂತೆ ನಟನೆ

Team Udayavani, Mar 8, 2019, 4:54 AM IST

ಹೆಂಡತಿ ಜೊತೆ ಮಾತನಾಡುವುದನ್ನು ತಪ್ಪಿಸಿಕೊಳ್ಳಲು ಅಮೆರಿಕದ ವ್ಯಕ್ತಿ 62 ವರ್ಷಗಳ ಸುದೀರ್ಘ‌ ಅವಧಿಗಳ ಕಾಲ ಕಿವುಡ, ಮೂಗನಂತೆ ನಟಿಸಿದ್ದಾರೆ. ಈ ರೀತಿ ಮಾಡಿದ ಪತಿಯ ವಿರುದ್ಧ ಪತ್ನಿ ಡೊರೊತಿ(80) ಕೋರ್ಟ್‌ ಮೆಟ್ಟಿಲೇರಿ,ವಿಚ್ಛೇದನ ಕೋರಿದ್ದಾರೆ.

ಪತಿಯ ಮೇಲೆ ಇರಿಸಿದ್ದ ನಂಬಿಕೆಗೆ ಮೋಸವಾಗಿದೆ. ಇನ್ನು ಅವರ ಜೊತೆ ಜೀವನ ನಡೆಸಲು ನನಗೆ ಇಷ್ಟವಿಲ್ಲ, ನನಗೆ ವಿಚ್ಛೇದನೆ ನೀಡಿ ಎಂದು ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಬ್ಯಾರಿ ಡಾವ್ಸನ್‌(84) ತಾವು ಕಿವುಡ ಮತ್ತು ಮೂಗ ಎಂದು ಪತ್ನಿಯನ್ನು ನಂಬಿಸಿದ್ದಲ್ಲದೆ, ಪತ್ನಿ ಜೊತೆ ಸಂವಹನ ನಡೆಸಲು ಸನ್ನೆಯ ಭಾಷೆ ಕಲಿತಿದ್ದರು.

ಡೊರೊತಿ ಹೇಳುವಂತೆ ಅವರು ಬ್ಯಾರಿಗಾಗಿ 2 ವರ್ಷಗಗಳ ಕಾಲ ಕಷ್ಟ ಪಟ್ಟು ಸನ್ಹೆ ಭಾಷೆ ಕಲಿತಿದ್ದರು. ಅವರ ಜೊತೆ ಆರಾಮಾಗಿ ಸಂವಹನ ನಡೆಸಲು ಶುರುಮಾಡಿದಾಗ ಬ್ಯಾರಿ ತಮಗೆ ಕಣ್ಣು ಕಾಣುತ್ತಿಲ್ಲ ಎಂದು ನಟಿಸಲು ಆರಂಭಿಸಿದರು.

ಡೊರೊತಿ ಯುಟ್ಯೂಬ್‌ನಲ್ಲಿ ಕರೋಕೆ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಬ್ಯಾರಿ ಹಾಡುತ್ತಿದ್ದ ವಿಡಿಯೋವೊಂದು ಕಣ್ಣಿಗೆ ಬಿದ್ದು ಈ ಗುಟ್ಟು ರಟ್ಟಾಯಿತಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ