ನಾನು ಸಿಂಹದ ಅವತಾರ ಎಂದಳು ಈ ಗಟ್ಟಿಗಿತ್ತಿ
Team Udayavani, Nov 4, 2019, 1:35 AM IST
ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯದಲ್ಲಿ ಗೋಡೆಯನ್ನು ಹತ್ತಿ ಸಿಂಹವಿರುವ ಆವರಣದೊಳಕ್ಕೆ ನುಗ್ಗಿದ್ದ ಮಹಿಳೆಯೊ ಬ್ಬಳು ಸಿಂಹದ ಮುಂದೆ ಮುಖಾಮುಖೀಯಾಗಿದ್ದ ವೀಡಿ ಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನು ಇನ್ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಮಹಿಳೆ ಸಿಂಹದ ಮುಂದೆ ನಿಂತು ಅದನ್ನು ಛೇಡಿಸು ತ್ತಿದ್ದರೂ ಸಿಂಹ ಮಾತ್ರ ಕದಲದೇ ಆಕೆಯನ್ನೇ ದಿಟ್ಟಿಸಿ ನೋಡುತ್ತಿತ್ತು. ಇದು ಎಲ್ಲರನ್ನೂ ಅಚ್ಚರಿಗೆ ಕೆಡವಿತ್ತು. ಈಗ ಆಕೆ 32 ವರ್ಷದ ಮೇರಿ ಆಟ್ರಿ ಎಂಬ ವಿಚಾರ ಗೊತ್ತಾಗಿದೆ. ಏಕಾಏಕಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿ ಕೊಂಡಿರುವ ಆಕೆ, “ನಾನು ಸಿಂಹದ ಅವತಾರ. ನಾನು ಕೂಡ ಸಿಂಹವೇ’ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಯಾವುದೇ ಮಾನವ ಅಥವಾ ಪ್ರಾಣಿ ನನ್ನ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ. ಅದು ಗೊತ್ತಿದ್ದ ಕಾರಣವೇ ಆ ಸಿಂಹ ನನಗೇನೂ ಮಾಡಲಿಲ್ಲ ಎಂದೂ ಆಕೆ ಹೇಳಿದ್ದು, ಈ ವೀಡಿಯೋ ಕೂಡ ವೈರಲ್ ಆಗಿದೆ.