ನಾಯಿ ಎಂದು ತಿಳಿದು ತೋಳ ಇರಿಸಿಕೊಂಡ!

ಹೌದಾ ಮಾರಾಯ್ರೆ!

Team Udayavani, Dec 6, 2019, 7:50 AM IST

ಕೆನಡಾದ ಎಲಿ ಬೊರೋಡಿಟ್‌ಸ್ಕೈ ಎಂಬುವರಿಗೆ ಇತ್ತೀಚೆಗೆ ಮರೆಯಲಾಗದ ಪಾಠದ ಅನುಭವವಾಗಿತ್ತು. ಬೆಣ್ಣೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ಅವರು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ನಾಯಿಯಂತೆಯೇ ಇರುವ ಪ್ರಾಣಿ ಕಾಣಿಸಿತು.

ಛೇ ಯಾರಧ್ದೋ ನಾಯಿ. ಅದನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗುವುದು ಸರಿಯಲ್ಲವೆಂದು ತಿಳಿದು, ಕಾರ್‌ನ ಹಿಂದಿನ ಸೀಟ್‌ನಲ್ಲಿ ತಂದು ಇರಿಸಿದರು. ಹೆಡ್‌ಲೈಟ್‌ನ ಬೆಳಕು ಇದ್ದರೂ, ಖಚಿತವಾಗಿ ಬೊರೋಡಿಟ್‌ಸ್ಕೈಗೆ ಯಾವ ಪ್ರಾಣಿ ಎಂದು ಗೊತ್ತಾಗಿರಲಿಲ್ಲವಂತೆ. ನಂತರ ಅದನ್ನು ಪ್ರಾಣಿ ದಯಾ ಸಂಘಕ್ಕೆ ಹಸ್ತಾಂತರಿಸಿದರು.

ಸಂಘದ ಕಚೇರಿಗೆ ತೆರಳಿದ ಅವರು ಪ್ರಾಣಿಯನ್ನು ನೋಡಿ ಅಲ್ಲಿದ್ದವರೂ ಕೂಡ ಅಚ್ಚರಿಗೊಂಡರು. ಏಕೆಂದರೆ ಎಲಿ ಬೊರೋಡಿಟ್‌ ಸ್ಕೈ ಕಾರ್‌ನಲ್ಲಿ ತಂದದ್ದು ನಾಯಿ ಇಲ್ಲ ತೋಳವೆಂದು ಖಚಿತವಾಯಿತು. ಆಘಾತಗೊಂಡ ಅವರು ‘ನಾನು ಅದು ಜರ್ಮನ್‌ ಶೆಪರ್ಡ್‌ ತಳಿಯ ನಾಯಿ ಇರಬೇಕೆಂದು ಯೋಚಿಸಿದ್ದೆ. ಅಬ್ಟಾ ಏನು ಆಗಲಿಲ್ಲ. ಬದುಕಿದೆಯೇ ಬಡಜೀವವೇ’ ಎಂದು ಹೇಳಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಟ್ವಿಟರ್‌ನಲ್ಲಿ ಅಮೆರಿಕದ ವ್ಯಕ್ತಿಯೊಬ್ಬರು ಪೋಸ್ಟ್‌ ಮಾಡಿರುವ ದೈತ್ಯ ಸೊಳ್ಳೆಯ ಚಿತ್ರ ನೋಡಿ ಜಾಲತಾಣಿಗರು ಬೆಚ್ಚಿಬಿದ್ದಿದ್ದಾರೆ. ದೈತ್ಯ ಸೊಳ್ಳೆಯ ಜತೆ...

  • 28 ವರ್ಷಗಳ ಹಿಂದೆ ತನ್ನ ಹೆತ್ತವರು ತೆಗೆಸಿಕೊಂಡಿದ್ದ ಫೋಟೋವನ್ನು ಮರುಸೃಷ್ಟಿ ಮಾಡಿ, 21 ವರ್ಷ ವಯಸ್ಸಿನ ಯುವಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ರಾಮೊನ್‌ ಮತ್ತು...

  • ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು...

ಹೊಸ ಸೇರ್ಪಡೆ