ಕೊರಳಿಗೆ ಹಾವು ಸುತ್ತಿ ಕಳ್ಳನ ವಿಚಾರಣೆ

Team Udayavani, Feb 12, 2019, 4:17 AM IST

ಕಳ್ಳರ ವಿಚಾರಣೆ ನಡೆಸುವಾಗ ಪೊಲೀಸರು ಕೆಲವೊಮ್ಮೆ  ಅತಿರೇಕದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಡೊನೇಷ್ಯಾದ ಪಾಪುವಾ ಪೊಲೀಸರು ಕಳ್ಳನ ಬಾಯಿ ಬಿಡಿಸಲು ಅನುಸರಿಸಿದ ಕ್ರಮ ಜಗತ್ತಿನಾದ್ಯಂತ ಟೀಕೆಗೆ  ಗುರಿಯಾಗಿದೆ. ಜೀವಂತ ಹಾವನ್ನು ಕಳ್ಳನ ಕೊರಳಿಗೆ ಸುತ್ತಿ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ. ಕಳ್ಳ ಮೊಬೈಲ್‌ ಫೋನ್‌ ಗಳನ್ನು ಕದ್ದಿದ್ದ. ಅದನ್ನು ಬಾಯಿಬಿಡಿಸಲು ಹಾವಿನ ತಲೆಯನ್ನು ಆತನ ಮುಖದ ಬಳಿ ಒಯ್ದು ಪೊಲೀಸರು, “ಎಷ್ಟು ಫೋನು ಕದ್ದಿದ್ದೀಯ’ ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ಇದು ವಿಷವಿಲ್ಲದ ಹಾವು ಮತ್ತು ಅದನ್ನು ಪಳಗಿಸಲಾಗಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ