ಭಾರತದ ಜೆಇಇ ಪ್ರಶ್ನೆ ಪತ್ರಿಕೆ ಕುರಿತ ವೀಡಿಯೋ ಆಸ್ಟ್ರೇಲಿಯಾದಲ್ಲಿ ವೈರಲ್‌

Team Udayavani, Jul 11, 2019, 11:56 AM IST

ನಮ್ಮ ದೇಶದ ಐಐಟಿಗಳಲ್ಲಿ ಇಂಜಿನಿಯರಿಂಗ್‌ ಕೋರ್ಸ್‌ಗೆ ನಡೆವ ಪ್ರವೇಶ ಪರೀಕ್ಷೆ “ಜೆಇಇ’ಯ ಪ್ರಶ್ನೆ ಪತ್ರಿಕೆಯೊಂದನ್ನು ಆಸ್ಟ್ರೇಲಿಯಾದ ಇಂಜಿನಿಯರಿಂಗ್‌ ಪ್ರೊಫೆಸರ್‌ ಒಬ್ಬರು ವಿಶ್ಲೇಷಣೆ ನಡೆಸುತ್ತಿರುವ ವೀಡಿಯೋವೊಂದು ಭಾರೀ ವೈರಲ್‌ ಆಗಿದೆ.

ಮೊದಲಿಗೆ ಗಣಿತ ಪತ್ರಿಕೆಯನ್ನು ಕೈಯಲ್ಲಿ ಹಿಡಿದ ಪ್ರೊಫೆಸರ್‌, ಈ ಪ್ರಶ್ನೆಗಳನ್ನು ನಾನು 12ನೇ ತರಗತಿಯಲ್ಲಿದ್ದಾಗ ನನಗೆ ನೀಡಿದ್ದರೆ, ಪರೀಕ್ಷಾ ಕೊಠಡಿ ಯಲ್ಲೇ ಅತ್ತುಬಿಡುತ್ತಿದ್ದೆ ಎಂದಿದ್ದಾರೆ. ಈಗಲೂ ನನಗೆ 1 ಗಂಟೆ ಸಮಯಾವಕಾಶದಲ್ಲಿ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಪ್ರಶ್ನೆ ಪತ್ರಿಕೆಗಳನ್ನು ವಿಮರ್ಶೆ ಮಾಡಲು ಇತರ ಪ್ರೊಫೆಸರ್‌ಗಳಿಗೆ ನೀಡಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು, ಇಷ್ಟು ಕ್ಲಿಷ್ಟಕರವಾದ ಪ್ರವೇಶ ಪರೀಕ್ಷೆ ಪಾಸಾಗುವ ವಿದ್ಯಾರ್ಥಿ ಅತ್ಯುತ್ತಮ ಇಂಜಿನಿಯರ್‌ ಆಗಿ ಹೊರಬರುತ್ತಾನೆ ಎಂದರೆ, ಮತ್ತೂ ಹಲವರು, ಪ್ರಶ್ನೆಪತ್ರಿಕೆಗಳನ್ನು ಇಷ್ಟು ಕಠಿಣ ಮಾಡುವ ಅಗತ್ಯವಿಲ್ಲ. ಕೋಚಿಂಗ್‌ ಕ್ಲಾಸ್‌ಗಳಿಗೆ ಜನರು ದುಡ್ಡು ಸುರಿಯಲಿ ಎಂದು ಈ ರೀತಿಯ ವ್ಯವಸ್ಥೆ ತರಲಾಗಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ