ಚಪ್ಪಲಿ ಬಿಟ್ಟು ಹೋಗಿ ಸಿಕ್ಕಿಬಿದ್ದ ಕಳ್ಳ!

Team Udayavani, Jul 27, 2019, 1:34 PM IST

ಕೋಲ್ಕತಾದಲ್ಲೊಬ್ಬ ಕಳ್ಳ, ತಾನು ಕಳ್ಳತನ ಮಾಡಿದ ಸ್ಥಳದಲ್ಲಿ ಚಪ್ಪಲಿ ಬಿಟ್ಟುಹೋಗಿ ಆ ಮೂಲಕವೇ ಸಿಕ್ಕಿಬಿದ್ದಿದ್ದಾನೆ. ನಗರದ ನ್ಯೂ ಅಲಿಪೋರ್‌ ಎಂಬ ಪ್ರಾಂತ್ಯದಲ್ಲಿನ ಅರಿಂದಮ್‌ ಚಟರ್ಜಿ ಎಂಬುವರ ಮನೆಯೊಳಗೆ ಬುಧವಾರ ರಾತ್ರಿ 2:30ರ ಸುಮಾರಿಗೆ ನುಗ್ಗಿದ್ದ ಕಳ್ಳ ಬೆಲೆಬಾಳುವ ಸೆಲ್‌ಫೋನ್‌ಗಳನ್ನು ಕದ್ದಿದ್ದ. ಹೆಜ್ಜೆ ಸಪ್ಪಳ ಕೇಳುತ್ತಲೇ ಮನೆ ಮಾಲೀಕ ಚೌಧರಿ ಗಾಬರಿಯಾಗಿ ಎದ್ದಿದ್ದನ್ನು ಗಮನಿಸಿದ್ದ ಕಳ್ಳ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದ.

ನಂತರ ಕಾಂಪೌಡ್‌ ಹಾರಿ ಓಡುವಾಗ ತನ್ನದೊಂದು ಚಪ್ಪಲಿ ಉದುರಿಸಿಕೊಂಡು ಹೋಗಿದ್ದ. ಕಳ್ಳ ಬಂದಿದ್ದು ಗೊತ್ತಾಗುತ್ತಿದ್ದಂತೆ ಚೌಧರಿ ತಕ್ಷಣ ಪೊಲೀಸರಿಗೆ ಫೋನಾಯಿಸಿದ್ದರು. ಕೆಲವೇ ನಿಮಿಷಗಳಲ್ಲಿ ಮನೆಗೆ ಆಗಮಿಸಿದ ಪೊಲೀಸರಿಗೆ ಕಳ್ಳನ ಚಪ್ಪಲಿ ಸಿಕ್ಕಿತ್ತು. ತಕ್ಷಣವೇ ಎಲ್ಲೆಡೆ ಅಲರ್ಟ್‌ ಮಾಡಲಾಗಿದ್ದರಿಂದ ಒಂದೇ ಚಪ್ಪಲಿ ಹಾಕಿಕೊಂಡು ಓಡುತ್ತಿದ್ದ ಕಳ್ಳನನ್ನು ಹಿಡಿಯಲಾಗಿದೆ. ಶೇಖ್‌ ರಾಜೇಶ್‌ ಅಲಿಯಾಸ್‌ ರಾಜು ಎಂಬ ಆತ ಈ ಹಿಂದೆ ಹಲವಾರು ಕಳ್ಳತನ ನಡೆಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

  • ರಾಜ್ಯಸಭಾ ಟೀವಿ ಟ್ವಿಟರ್‌ನಲ್ಲಿ ರಣಥಂಬೂರು ರಾಷ್ಟ್ರೀಯ ಅಭಯಾರಣ್ಯದಲ್ಲಿ ಕರಡಿಯೊಂದು ತನ್ನನ್ನು ಭೇಟೆಯಾಡಲು ಬಂದ ಹುಲಿಯನ್ನು ಉಗ್ರ ಸ್ವರೂಪ ತಾಳಿ ಹೆದರಿಸಿ...

ಹೊಸ ಸೇರ್ಪಡೆ