ಲೂಸಿಯಾನಾದ ಆಮೆಗೆ ಗಾಲಿ ಕಾಲುಗಳ ಸೌಲಭ್ಯ!

Team Udayavani, Jun 23, 2019, 5:50 PM IST

ಸಿಕ್ಕಾಬಟ್ಟೆ ಸುತ್ತಾಡುವವರಿಗೆ ಕಾಲಲ್ಲಿ ಚಕ್ರ ಕಟ್ಟಿಕೊಂಡಿ ದ್ದೀಯ ಅಂತ ಬಯ್ತಾರೆ. ಆದರೆ, ಅಮೆರಿಕದ ಲೂಸಿಯಾ ನಾ ದಲ್ಲಿ ಪೆಡ್ರೋ ಹೆಸರಿನ ಆಮೆಗೆ ಕಾಲಿನ ಬದಲಾಗಿ ಅಕ್ಷರಶಃ ಚಕ್ರಗಳನ್ನೇ ಜೋಡಿಸಲಾಗಿದೆ. ಇಂಥದ್ದೊಂದು ವಿಶೇಷ ಪ್ರಯೋಗ ಮಾಡಿ ಯಶಸ್ವಿಯಾಗಿರುವವರು ಲೂಸಿಯಾನಾ ಸ್ಟೇಟ್‌ ವಿಶ್ವವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ವೈದ್ಯರು. ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಈ ಆಮೆಗೆ, ಮಕ್ಕಳ ಆಟದ ಕಾರುಗಳಲ್ಲಿನ ಮೋಟಾರು, ಗಾಲಿಗಳನ್ನೇ ಅಳವಡಿಸಿದ್ದಾರೆ ಅವರು. ಹೀಗಾಗಿ, ಆಮೆ ಸರಾಗವಾಗಿ ಓಡುವಂತಾಗಿದೆ. ವೈದ್ಯರ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರು ತ್ತಿದೆ. ಅಂದಹಾಗೆ, ಈ ಆಮೆಯನ್ನು ಲೂಸಿಯಾನಾದ ನಿವಾಸಿಯೊಬ್ಬರು ಕೆಲ ತಿಂಗಳ ಹಿಂದೆ ಖರೀದಿಸಿದ್ದರು. ಆಗಲೇ ಅದಕ್ಕೆ ಹಿಂಬದಿಯ ಕಾಲು ಇರಲಿಲ್ಲ. ಅದೊಂದು ದಿನ ಮನೆಯಿಂದ ಆಚೆಗೆ ಹೋಗಿ ಅಪಘಾತಕ್ಕೀಡಾಗಿದ್ದರಿಂದ “ಪೆಡ್ರೋ’ ಮತ್ತೂಂದು ಕಾಲನ್ನೂ ಕಳೆದುಕೊಂಡಿದ್ದ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೀಸೆ ಬಿಡುವುದು ಹೆಮ್ಮೆಯ ಸಂಕೇತವಾಗಿರಬಹುದು. ಇಷ್ಟುದ್ದ ಮೀಸೆ ಬಿಟ್ಟು ಅದನ್ನು ಆಗಾಗ ತಿರುವುವುದು ಖುಷಿಯನ್ನೂ ನೀಡಬಹುದು. ಆದರೆ ಇದು ದೊಡ್ಡ ಸಮಸ್ಯೆಯನ್ನೂ...

ಹೊಸ ಸೇರ್ಪಡೆ